More

    ಮೀನು ಹಿಡಿದು ಮರಳುವಷ್ಟರಲ್ಲಿ ಮುಳುಗಿದ್ದ ಮೀನುಗಾರರ 45 ಕಾರುಗಳು; ಕಾರಣ ಇಲ್ಲಿದೆ ನೋಡಿ..!

    ರಷ್ಯಾ: ಮೀನು ಹಿಡಿಯಲು ಹೋಗಿದ್ದ ಮೀನುಗಾರರು ಮರಳಿದ ಮೇಲೆ ಅವರಿಗೊಂದು ಆಶ್ಚರ್ಯ ಕಾದಿತ್ತು. ತಾವು ನಿಲ್ಲಿಸಿ ಹೋಗಿದ್ದ 45 ಕಾರುಗಳೇ ನೀರಿನಲ್ಲಿ ಮುಳುಗಿದ್ದವು.

    ತಮ್ಮ ಕಾರುಗಳನ್ನು ಹೆಪ್ಪುಗಟ್ಟಿದ ಮಂಜುವಿನ ಮೇಲೆ ಬಿಟ್ಟು ಹೋಗಿದ್ದರು. ಬರುವಷ್ಟರಲ್ಲಿ ಮಂಜು ಕರಗಿ ಕಾರುಗಳು ನೀರಿನಲ್ಲಿ ಅಂದಾಜು 7 ಅಡಿಗಳಷ್ಟು ಮುಳುಗಿದ್ದವು.

    ರಷ್ಯಾದ ವ್ಲಾಡಿವೋಸ್ಟಾಕ್ ಬಳಿಯ ವೊಯೆವೊಡಾ ಸಮುದ್ರ ತೀರದಲ್ಲಿ ಈ ಅವಘಡ ನಡೆದಿದೆ. ವೊಯೆವೊಡಾ ಸಮುದ್ರ ತೀರ ಮಂಜಿನಿಂದ ಆವೃತವಾಗಿದ್ದು ಕಾರುಗಳು ಅರ್ಧಂಬರ್ಧ ಮುಳುಗಿದ ಸ್ಥಿತಿಯಲ್ಲಿದ್ದವು.

    ಅದೃಷ್ಟವಶಾತ್​ ಹೀಗೆ ಮಂಜಿನ ಹಲಗೆಗಳನ್ನು ಒಡೆದು ಮುಳುಗಿದ ಕಾರಿನಲ್ಲಿ ಯಾರು ಇರಲಿಲ್ಲ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಸಾಲಿನಲ್ಲಿ ನಿಂತಿದ್ದ ವಾಹನಗಳು ಮಂಜುವಿನ ಹಲಗೆ ಒಡೆಯುತ್ತಿದ್ದಂತೆ ನೀರಿನಲ್ಲಿ ಮುಳುಗಿದವು. ಕೆಲ ವಾಹನಗಳ ಟಾಪ್​ ಮಾತ್ರ ಕಾಣುವಷ್ಟು ಮುಳುಗಿಹೋಗಿದ್ದವು. ಅದನ್ನು ನೋಡಲು ಭಯವಾಗುತ್ತಿತ್ತು ಎಂದಿದ್ದಾರೆ.

    ಮೀನು ಹಿಡಿಯುವುದಕ್ಕಾಗಿ ಕಾರು ನಿಲ್ಲಿಸಿ ಹೋಗಿದ್ದ ಅವರಿಗೆ ಮಂಜುಗಡ್ಡೆ ಒಡೆದು ನೀರಿನಲ್ಲಿ ಮುಳುಗಿರುವ ಕಾರಿನಲ್ಲೇ ಮೀನು ಹಿಡಿಯಬಹುದಿತ್ತು ಎನ್ನಿಸಿರಬೇಕು. (ಏಜೇನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts