More

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂದಣಿ, ಬೆಳಗ್ಗಿನಿಂದಲೇ ಭೋಜನ ವಿತರಣೆ

    ಸುಬ್ರಹ್ಮಣ್ಯ: ಮಹಾಶಿವರಾತ್ರಿ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಂಗಳವಾರ ಮತ್ತು ಬುಧವಾರ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಮಂಗಳವಾರ ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದ ಭಕ್ತರು ಅಲ್ಲಿಂದ ಕುಕ್ಕೆಗೆ ಆಗಮಿಸಿದ್ದಾರೆ.

    ಬುಧವಾರ ರಥಬೀದಿಯಿಂದಲೇ ಭಕ್ತರ ಸಂದಣಿ ಕಂಡುಬಂತು. ರಥಬೀದಿ, ಪೇಟೆ ಹಾಗೂ ಕುಮಾರಧಾರಾ ಸ್ನಾನಘಟ್ಟದಲ್ಲೂ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದರಿಂದ ಪಾರ್ಕಿಂಗ್ ಪ್ರದೇಶ, ವಸತಿಗೃಹಗಳು ಭರ್ತಿಯಾಗಿವೆ. ಸರ್ಕಾರಿ, ಸರ್ವೀಸ್ ಬಸ್‌ಗಳಲ್ಲೂ ಪ್ರಯಾಣಿಕರು ತುಂಬಿದ್ದರು. ಧರ್ಮಸ್ಥಳ-ಕುಕ್ಕೆ ಮಧ್ಯೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.

    ಆದರೆ ಬೆಂಗಳೂರು ಕಡೆಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾರ್ಕಿಂಗ್ ಸ್ಥಳಾವಕಾಶವಿಲ್ಲದೆ ಮುಖ್ಯ ರಸ್ತೆಯಲ್ಲೇ ವಾಹನ ನಿಲ್ಲಿಸಿದ್ದರಿಂದ ಸಂಚಾರಕ್ಕೂ ತೊಡಕು ಉಂಟಾಯಿತು. ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರಿಂದ ಬುಧವಾರ ಬೆಳಗ್ಗೆ 10 ಗಂಟೆಯಿಂದಲೇ ಭೋಜನ ಪ್ರಸಾದ ವಿತರಿಸಲಾಯಿತು. ಸಾಯಂಕಾಲ 4 ಗಂಟೆ ತನಕವೂ ವ್ಯವಸ್ಥಿತವಾಗಿ ಪ್ರಸಾದ ಭೋಜನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts