More

    ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಗ್ರಾಮೀಣ ಕ್ರೀಡಾಕೂಟ

    ಚನ್ನರಾಯಪಟ್ಟಣ: ತಾಲೂಕಿನ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ 89ನೇ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೂಕು ಆಡಳಿತ ವತಿಯಿಂದ ಶನಿವಾರ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು.

    ರಂಗನಾಥಸ್ವಾಮಿಯ ಸನ್ನಿಧಿಯ ಆವರಣದಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಮ್ಯಾರಥಾನ್ ನಡೆಯಿತು. ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ ಬೂಕ ಗ್ರಾಮದ ಶ್ರೀನಿವಾಸ್(ಪ್ರಥಮ), ಹಿರೀಸಾವೆಯ ಎಚ್.ಎಂ.ಮಧು(ದ್ವಿತೀಯ) ಹಾಗೂ ಬೂಕ ಗ್ರಾಮದ ಮಹಾಂತ್‌ಗೌಡ(ತೃತೀಯ) ಸ್ಥಾನ ಪಡೆದರು.
    ಮಹಿಳೆಯರ ವಿಭಾಗದಲ್ಲಿ ಬೂಕ ಗ್ರಾಮದ ಬಿ.ದಿಶಾ (ಪ್ರಥಮ), ಚಿತ್ರಶ್ರೀ (ದ್ವಿತೀಯ) ಹಾಗೂ ಐಶ್ವರ್ಯ (ತೃತೀಯ) ಸ್ಥಾನ ಪಡೆದರು. ರಂಗೋಲಿ ಸ್ಪರ್ಧೆಯಲ್ಲಿ ನುಗ್ಗೇಹಳ್ಳಿ ಗ್ರಾಮದ ಎಚ್.ಆರ್.ನೇತ್ರಾವತಿ (ಪ್ರಥಮ), ಬೂಕ ಗ್ರಾಮದ ಶಿಲ್ಪಾ (ದ್ವಿತೀಯ) ಹಾಗೂ ರಂಗನಾಥಪುರ ಗ್ರಾಮದ ಕಾವ್ಯಾ (ತೃತೀಯ) ಸ್ಥಾನ ಪಡೆದರು.

    ಇಂದು ಬಹುಮಾನ ವಿತರಣೆ: ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ರಾಸುಗಳು ಹಾಗೂ ಗ್ರಾಮೀಣ ಕ್ರೀಡಾಕೂಟದ ವಿಜೇತರಿಗೆ ಭಾನುವಾರ ಮಧ್ಯಾಹ್ನ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ನೆರವೇರಿದ ಬಳಿಕ ಧಾರ್ಮಿಕ ಕಾರ್ಯಕ್ರಮಲ್ಲಿ ಬಹುಮಾನ ವಿತರಿಸಲಾಗುವುದು.

    ಇದಕ್ಕೂ ಮುನ್ನ ಕ್ರೀಡಾಕೂಟಕ್ಕೆ ಉಪ ತಹಸೀಲ್ದಾರ್ ಮೋಹನ್‌ಕುಮಾರ್ ಚಾಲನೆ ನೀಡಿದರು. ಕಂದಾಯ ಇಲಾಖೆಯ ವೃತ್ತ ರಾಜಸ್ವ ನಿರೀಕ್ಷಕ ವಿರಾಜ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ದೇಗುಲದ ಪಾರುಪತ್ತೆದಾರ್ ರಂಗರಾಜು, ಗ್ರಾಮಲೆಕ್ಕಿಗರಾದ ಪಿ.ಎನ್.ಶೈಲಜಾ, ಸುಷ್ಮಿತಾ, ವಿ.ಜಿ.ನಂದನ್‌ಕುಮಾರ್, ಪ್ರಭು, ಸವಿಲ್‌ಕುಮಾರ್, ಬೂಕನಬೆಟ್ಟ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts