More

    ಗ್ರಾಮೀಣರಿಗೆ ಸಂಶೋಧನೆಗಳ ಮಾಹಿತಿ ಅಗತ್ಯ

    ಲಿಂಗಸುಗೂರು: ಗ್ರಾಮೀಣ ಜನರಿಗೆ ವಿಜ್ಞಾನ ಕ್ಷೇತ್ರದ ಸಂಶೋಧನೆ ಕುರಿತು ಜಾಗೃತಿ ಮೂಡಿಸಿದರೆ ಮೌಢ್ಯಾಚರಣೆ ನಿಯಂತ್ರಣ ಸಾಧ್ಯ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಚಿರಂಜೀವಿ ರೋಡಕರ್ ಹೇಳಿದರು.

    ಇದನ್ನೂ ಓದಿ: ವಿದ್ಯಾರ್ಥಿಗಳು ಸಂಶೋಧನೆಗೆ ಒತ್ತು ನೀಡಲಿ,ಬಿಇಒ

    ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಜರುಗಿದ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

    ಹೊಸ ಆವಿಷ್ಕಾರ, ಸಂಶೋಧನೆಗಳ ಮೂಲಕ ಪ್ರಗತಿ ಪಥದತ್ತ ಸಾಗುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಒಂದು. ಆದರೆ, ಹಳ್ಳಿ ಜನರಲ್ಲಿ ವೈಜ್ಞಾನಿಕ ಪ್ರಜ್ಞೆ, ವೈಚಾರಿಕ ಚಿಂತನೆಗಳು, ವಿಜ್ಞಾನ ಕ್ಷೇತ್ರದ ಸಂಶೋಧನೆಗಳ ಮಾಹಿತಿ ತಲುಪದಿರುವುದೇ ಅನಕ್ಷರತೆ, ಅನಾಚಾರ, ಮೌಢ್ಯತೆಗೆ ಕಾರಣ ಎಂದು ಕಳವಳ ವ್ಯಕ್ತಪಡಿಸಿದರು.

    ಪಿಡಬ್ಲ್ಯೂಡಿ ಸಚಿವ ಸತೀಶ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಮೂರು ದಶಕಗಳಿಂದ ಮೌಢ್ಯಾಚರಣೆಗಳ ವಿರುದ್ಧ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಡಾ.ಹುಲಿಕಲ್ ನಟರಾಜ್ ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಆಯೋಜಿಸುತ್ತ ಬರುತ್ತಿದ್ದಾರೆ.

    3ನೇ ರಾಜ್ಯ ಸಮ್ಮೇಳನ ಲಿಂಗಸುಗೂರಿನಲ್ಲಿ ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಸಮ್ಮೇಳನದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ ಸೇರಿ ಅನೇಕ ವಿಚಾರಗಳ ಕುರಿತು ನಾಡಿನ ಅನುಭವಿಗಳಿಂದ ಗೋಷ್ಠಿಗಳನ್ನು ಆಯೋಜಿಸಿದ್ದು ಶ್ಲಾಘನೀಯ ಎಂದರು.

    ಪ್ರಮುಖರಾದ ಇಂದುಮತಿ ಸಾಲಿಮಠ, ರವಿ ಪಾಟೀಲ್, ಎ.ಎನ್.ಹನುಮಂತಗೌಡ, ಡಾ.ರುದ್ರಗೌಡ ಪಾಟೀಲ್, ಅರಕಲಗೂಡು ಮಧುಸೂಧನ್, ಡಾ.ಹುಲಿಕಲ್ ನಟರಾಜ್, ರಮೇಶ ಪಾಟೀಲ್, ಗಂಗಾಧರ ದೇಶಮುಖ, ಪ್ರೊ.ಎನ್.ನಾಗರಾಜ, ರಮೇಶ ತೆಗ್ಗಿನಮನಿ, ಮಹಾಂತೇಶ ಗೌಡರ, ದ್ಯಾಮಣ್ಣ ಹೇರೂರು, ನಬಿಸಾಬ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts