More

    ವಿದ್ಯಾರ್ಥಿಗಳು ಸಂಶೋಧನೆಗೆ ಒತ್ತು ನೀಡಲಿ,ಬಿಇಒ

    ಚಿತ್ರದುರ್ಗ: ಮೂಲವಿಜ್ಞಾನಕ್ಕೆ ಹೆಚ್ಚಿನ ಗಮನ ನೀಡುವಂತೆ ಚಿತ್ರದುರ್ಗ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ರಾಜ್ಯವಿಜ್ಞಾನ ಪರಿಷತ್ ನಗರದ ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 31ನೇ ಜಿಲ್ಲಾ ಮಟ್ಟದ ರಾ ಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
    ರಾಜ್ಯವಿಜ್ಞಾನ ಪರಿಷತ್ ಖಜಾಂಚಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ವಿಜ್ಞಾನ ವಿಷಯ ಅಂಕಗಳಿಕೆಗೆ ಸೀಮಿತವಾಗದೆ,ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲೂ ಪೂರಕವಾಗಿರಬೇಕೆಂದರು. ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರಿಸ್ವಾಮಿ ಮಾತನಾಡಿದರು. ಪರಿಷತ್ ಜಿಲ್ಲಾಧ್ಯಕ್ಷ ಲತೀಫ್‌ಸಾಬ್ ಅಧ್ಯಕ್ಷತೆ ವಹಿಸಿದ್ದರು.
    ಸಿಲಿಕಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಡಿ.ಗೋಪಾಲನಾಯಕ, ಮುಖ್ಯಶಿಕ್ಷಕ ಕರಿಯಪ್ಪ, ಪರಿಷತ್ ಜಿಲ್ಲಾಉಪಾಧ್ಯಕ್ಷ ಶ್ರೀನಿವಾಸ್,ನಿವೃತ್ತ ಪ್ರಾಂಶುಪಾಲ ಇ.ರುದ್ರಮುನಿ, ಹಾಲೇಶ್,ಶ್ರೀನಿವಾಸಮೂರ್ತಿ,ಮಂಜುನಾಥ್ ಮತ್ತಿತರರು ಇದ್ದರು. ಜಿಲ್ಲೆಯ ವಿವಿಧ ಶಾಲೆಗಳಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
    ಇದರಲ್ಲಿ ಅತ್ಯುತ್ತಮ 10 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾ ಜ್ಯಮಟ್ಟದ ಸಮಾವೇಶ 2024 ರ ಜನವರಿ ಎರಡನೇ ವಾರ ಕೊಪ್ಪಳದಲ್ಲಿ ನಡೆಯಲಿದೆ.
    ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
    ಗ್ರಾಮೀಣ ಹಿರಿಯರ ವಿಭಾಗ- ಚಿತ್ರದುರ್ಗ ತಾಲೂಕು ಭರಮಸಾಗರ ಡಿವಿಎಸ್ ಪ್ರೌಢಶಾಲೆಯ ಕೆ.ಎನ್.ಸೃಷ್ಠಿ,ಹಿರಿಯೂರು ತಾ ಲೂಕು ಭೀಮನಬಂಡೆ ಯಾಜ್ಞಾವಲ್ಕೃ ಪಬ್ಲಿಕ್ ಸ್ಕೂಲ್‌ನ ಎ.ಮೌಲ್ಯಶ್ರೀ, ಚಳ್ಳಕೆರೆ ಬಾಲೇನಹಳ್ಳಿ ಗೇಟ್ ಇಂದಿರಾಗಾಂಧಿ ವಸತಿ ಶಾಲೆಯ ಆರ್.ಅನುಷಾ. ಗ್ರಾಮೀಣ ಕಿರಿಯರ ವಿಭಾಗ-ಚಿತ್ರದುರ್ಗ ತಾಲೂಕು ಗೊಲ್ಲರಹಟ್ಟಿ ಚೌಳಿಹಳ್ಳಿ ಸರ್ಕಾರಿಪ್ರೌಢಶಾಲೆಯ ತನುಜಾ, ಭ ರಮಸಾಗರ ಡಿವಿಎಸ್ ಪ್ರೌಢಶಾಲೆಯ ಕೆ.ಎನ್.ಸುಪ್ರೀತಾ. ನಗರ ಹಿರಿಯರ ವಿಭಾಗ-ಚಿತ್ರದುರ್ಗ ವಿದ್ಯಾವಿಕಾಸ ವಿದ್ಯಾಸಂಸ್ಥೆ ಎಸ್.ಎ. ಮೌನೀಶ್, ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ಎಂ.ವಿ.ವಿಜಯಲಕ್ಷ್ಮೀ ಹಾಗೂ ರುಮಾಂಡ್ಲಅಧಿತ್ರಿ. ನಗರ ಕಿರಿಯರ ವಿಭಾಗ- ಚಿತ್ರ ದುರ್ಗ ಡಾನ್‌ಬಾಸ್ಕೋ ಶಾಲೆಯ ನಿಬೋಧ್ ಚಕ್ರವರ್ತಿ ಹಾಗೂ ಚಳ್ಳಕೆರೆ ಸಹ್ಯಾದ್ರಿ ಪ್ರೌಢಶಾಲೆಯ ದಿಯಾ ಗಂಧವಿಡಿ ಸಹ್ಯಾದ್ರಿ ಪ್ರೌಢ ಶಾಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts