More

    ಗ್ರಾಮೀಣ ಸಾಹಿತ್ಯಕ್ಕೆ ಸಿಗಲಿ ಪ್ರೋತ್ಸಾಹ

    ಮುದಗಲ್: ಗ್ರಾಮೀಣ ಭಾಗದ ಸಾಹಿತ್ಯ ಹಾಗೂ ಕಲೆ ಎಲೆಮರೆ ಕಾಯಿಯಂತೆ ಆಗಿದೆ. ಗ್ರಾಮೀಣ ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆತಾಗ ನಾಡಿಗೆ ತಲುಪಲು ಸಾಧ್ಯ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.

    ತೊಂಡಿಹಾಳದಲ್ಲಿ ಶರಣಪ್ಪ ಕರಡಿ ರಚಿಸಿದ, ಹೊಳೆಸಾಲು ಪ್ರಕಾಶನದ ಪದಶ್ಯಾಣನ ಪರಪಂಚ ತ್ರಿಪದಿಗಳ ತತ್ವ ಪದ ಗ್ರಂಥ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು. ಗ್ರಾಮೀಣ ಮೂಲದ ಸಾಹಿತಿಗಳು ನಾಡಿಗೆ ಜ್ಞಾನಪೀಠ ತಂದುಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಸಾಹಿತಿಗಳು ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡುವುದಕ್ಕೆ ಸರ್ಕಾರ ಯೋಜನೆ ರೂಪಿಸಬೇಕಾಗಿದೆ ಎಂದರು.

    ಕೃತಿಯ ಕುರಿತು ಉಪನ್ಯಾಸ ನೀಡಿದ ಜೇವರ್ಗಿಯ ಪ್ರಾಚಾರ್ಯ ಡಾ.ಧರ್ಮಣ್ಣ ಬಡಿಗೇರ, ಉಪನ್ಯಾಸಕರಾದ ಡಾ.ಪರಸಪ್ಪ ಕಲಾದಗಿ, ಡಾ.ಗೊವಿಂದರಾಜ, ಡಾ.ಶಿವಗ್ಯಾನಪ್ಪ, ಪದಶ್ಯಾಣನ ಪರಪಂಚ ಗ್ರಂಥ ಅನೇಕ ಮಾರ್ಮಿಕವಾದ ತತ್ವವನ್ನೊಳಗೊಂಡಿದೆ. ಇತ್ತೀಚೆಗೆ ಮೋಬೈಲ್ ಬಳಕೆ ಮೂಲಕ ಅನೇಕರು ಮಾನಸಿಕ ಸಮಸ್ಯೆಗೆ ಒಳಗಾಗುತ್ತಿರುವದು ಕಂಡು ಬರುತ್ತಿದೆ. ಆದರೆ, ಮೊಬೈಲ್ ಮೂಲಕ ಸಾಹಿತ್ಯವನ್ನು ಪಸರಿಸಿ ಸಾವಿರಾರು ಓದುಗರನ್ನು ಗಳಿಸಿಕೊಂಡಿರುವ ಗ್ರಂಥ ರಚನೆಕಾರ ಶರಣಪ್ಪ ಕರಡಿ ಅವರ ಸಾಧನೆ ಅಸಾಮಾನ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts