More

    ಗ್ರಾಮಾಭಿವೃದ್ಧಿ ಯೋಜನೆ ಅನುದಾನ ಸದ್ಬಳಕೆ ಮಾಡಿಕೊಳ್ಳಿ

    ಹಟ್ಟಿಚಿನ್ನದಗಣಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 60 ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ ಹೇಳಿದರು.

    ಇದನ್ನೂ ಓದಿ: ದಾನಿಗಳ ಸಹಾಯದಿಂದ ಗ್ರಾಮಾಭಿವೃದ್ಧಿ

    ಪಟ್ಟಣದ ಅಲೆಮಾರಿ ಜನಾಂಗದ ಕಾಲನಿಯಲ್ಲಿ ಅಂಗವಿಕಲರಿಗೆ ಸಲಕರಣೆಗಳ ವಿತರಣೆ ಹಾಗೂ ವಾತ್ಸಲ್ಯ ಯೋಜನೆಯಡಿ ಕಡುಬಡವರ ಮನೆ ನಿರ್ಮಾಣ ಕಾಮಗಾರಿಗೆ ಧನಸಹಾಯ ವಿತರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

    ಯೋಜನೆಯಿಂದ ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಸಂಸ್ಥೆ ನೀಡುವ ಸಹಾಯಧನ ಸೇರಿ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

    ಯೋಜನೆಯಡಿ ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಯೋಜನೆಯಿಂದ ನೀಡಲಾಗುವ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೋಹನ್ ನಾಯ್ಕ ತಿಳಿಸಿದರು. ಪಿಎಸ್‌ಐ ಧರ್ಮಪ್ಪ ಆರ್.ಕೆ., ತಾಲೂಕು ಯೋಜನಾಧಿಕಾರಿ ಅಡಿವೆಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts