More

    ನಿಯಮದಂತೆ ಸಾಮಾನ್ಯ ಸಭೆ ಆಯೋಜಿಸಿ

    ಮಾನ್ವಿ: ಪುರಸಭೆ ಸಾಮಾನ್ಯ ಸಭೆಯನ್ನು ಪ್ರತಿ ತಿಂಗಳು ಕರೆದರೆ ಪಟ್ಟಣದ ಜನರಿಗೆ ಮೂಲ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. 6ರಿಂದ 7 ತಿಂಗಳಿಗೊಮ್ಮೆ ಸಭೆ ಕರೆದರೆ ವಾರ್ಡ್ ಜನರಿಗೆ ಸೌಲಭ್ಯ ತಲುಪಿಸಲು ಕಷ್ಟವಾಗುತ್ತದೆ ಎಂದು ಮುಖ್ಯಾಧಿಕಾರಿ ಗಂಗಾಧರ ಅವರನ್ನು ಪುರಸಭೆ ವಿಪಕ್ಷ ನಾಯಕ ರಾಜಾ ಮಹೇಂದ್ರನಾಯಕ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಭೆ ಕರೆಯಲು ವಿಳಂಬವಾಗಿದ್ದು, ಇನ್ನು ಮುಂದೆ ತಿಂಗಳಿಗೊಮ್ಮೆ ಸಭೆ ಕರೆಯುವುದಾಗಿ ಮುಖ್ಯಾಧಿಕಾರಿ ಹೇಳಿದರು. 2022ರ ಜುಲೈನಿಂದ ಡಿಸೆಂಬರ್‌ವರೆಗಿನ ಜಮಾ-ಖರ್ಚುಗಳಿಗೆ ಮಂಜೂರಾತಿ ನೀಡುವಂತೆ ಮುಖ್ಯಾಧಿಕಾರಿ ಕೋರಿದರು.

    ನಿಯಮದಂತೆ 90 ದಿನಗಳಿಗೊಮ್ಮೆ ಸಾಮಾನ್ಯ ಸಭೆ ನಡೆಸಬೇಕು. ಆದರೆ, 6 ತಿಂಗಳಿಗೊಮ್ಮೆ ಸಭೆ ಕರೆಯಲಾಗುತ್ತಿದೆ. ಪಟ್ಟಣದಲ್ಲಿ ಬೀದಿ ದೀಪ ವ್ಯವಸ್ಥೆ, ಕುಡಿಯುವ ನೀರಿನ ಶಾಶ್ವತ ಕಾಮಗಾರಿ ಸೇರಿ ಮೂಲ ಸೌಲಭ್ಯಗಳಿಗೆ ಅದ್ಯತೆ ನೀಡಿ ನಂತರ ಇತರ ಅಗತ್ಯಗಳಿಗೆ ಅನುದಾನ ಹಂಚಿಕೆ ಮಾಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts