More

    ಸ್ವ ಉದ್ಯೋಗಕ್ಕೆ ಪ್ರೇರಣೆ ರುಡ್‌ಸೆಟ್ ಉದ್ದೇಶ, ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

    ಬೆಳ್ತಂಗಡಿ: ಭಾರತದಲ್ಲಿ ಅಪಾರ ಜನಸಂಖ್ಯೆ ಎಂದೂ ಸಮಸ್ಯೆ ಆಗಲಾರದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರತಿಭೆ, ಬುದ್ಧಿವಂತಿಕೆ ಹಾಗೂ ಸಾಮರ್ಥ್ಯ ಇರುತ್ತದೆ. ಅವರಿಗೆ ಸಕಾಲದಲ್ಲಿ ಮಾಹಿತಿ ಹಾಗೂ ತರಬೇತಿ ನೀಡಿ ಸ್ವಉದ್ಯೋಗ ಮಾಡಲು ಪ್ರೇರಣೆ ನೀಡುವುದೇ ರುಡ್‌ಸೆಟ್ ಸಂಸ್ಥೆಯ ಉದ್ದೇಶ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

    ಉಜಿರೆಯಲ್ಲಿ ಗುರುವಾರ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಕೇಂದ್ರಗಳ (ರುಡ್‌ಸೆಟ್) ಆಡಳಿತ ವಿಭಾಗದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 1982ರಲ್ಲಿ ಉಜಿರೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ ರುಡ್‌ಸೆಟ್ ಸಂಸ್ಥೆ ಇಂದು ದೇಶದೆಲ್ಲೆಡೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

    ಮಹಿಳೆಯರು ಇಂದು ಬ್ಯೂಟಿ ಪಾರ್ಲರ್, ಟೈಲರಿಂಗ್ ಮೊದಲಾದ ತರಬೇತಿಗಳನ್ನು ಅತೀ ಕಡಿಮೆ ಅವಧಿಯಲ್ಲಿ ಪಡೆದು ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಹಿಳೆಯರು ನಿರುದ್ಯೋಗಿಗಳಲ್ಲ, ಅವರಿಗೆ ಮನೆಯಲ್ಲಿಯೇ ಕೆಲಸಗಳು, ಕುಟುಂಬ ನಿರ್ವಹಣಾ ಕಾರ್ಯಗಳು ಇರುತ್ತವೆ. ಇಂದು ಬದಲಾದ ಜಗತ್ತಿಗೆ ತಕ್ಕಂತೆ ತಮ್ಮ ಕೌಶಲ ವೃದ್ಧಿಸಿಕೊಂಡು ಸ್ವ-ಉದ್ಯೋಗ ಮಾಡುವ ಮೂಲಕ ತಮ್ಮ ಸಂಸಾರದ ಖರ್ಚು ನಿಭಾಯಿಸಲು ಸಹಕರಿಸುತ್ತಾರೆ ಎಂದು ಹೇಳಿದರು.

    ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೈ ಕಟ್ಟಡ ಉದ್ಘಾಟಿಸಿದರು. ಬೆಂಗಳೂರು ಕಚೇರಿಯ ಜನರಲ್ ಮ್ಯಾನೇಜರ್ ರಾಕೇಶ್ ಕಶ್ಯಪ್, ಮಂಗಳೂರು ಕಚೇರಿ ಜನರಲ್ ಮ್ಯಾನೇಜರ್ ಬಿ.ಯೋಗೀಶ್ ಆಚಾರ್ಯ, ಅಧಿಕಾರಿಗಳಾದ ಸತ್ಯಮೂರ್ತಿ, ಬಿಪುಲ್‌ಚಂದ್ರ ಶಹಾ, ರುಡ್‌ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಜನಾರ್ದನ್, ನಿರ್ದೇಶಕ ಪದದಯ್ಯ ಸಿ.ಹಿರೇಮಠ್, ಹಿರಿಯ ತರಬೇತುದಾರರಾದ ಜೇಮ್ಸ್ ಅಬ್ರಹಾಂ, ಅನಸೂಯಾ, ತರಬೇತುದಾರರಾದ ಮಾಧವಿ ರೈ, ಸುಭಾನ್ ಮತ್ತು ಸಂಸ್ಥೆಯ ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

    ದೇಶದಲ್ಲಿ 27 ಆರ್‌ಸಿಟಿ ಹಾಗೂ 63 ರುಡ್‌ಸೆಟ್‌ಗಳು ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಮುನ್ನಡೆಯುತ್ತಿವೆ. ಬೇರೆ ಬೇರೆ ತರಗತಿಗಳು ಹಮ್ಮಿಕೊಂಡು ಸ್ವ ಉದ್ಯೋಗಕ್ಕೆ ಪ್ರೇರಣೆ ಒದಗಿಸಲಾಗಿದೆ. ಪ್ರತಿ ವರ್ಷ 750ಕ್ಕೂ ಅಧಿಕ ತರಗತಿಗಳು ನಡೆಯುತ್ತವೆ. ಬ್ಯಾಂಕ್‌ನಿಂದಲೇ ಮುದ್ರ, ಶಿಶು, ತರುಣ್ ಉಳಿದ ಸಾಲ ಒದಗಿಸಲಾಗುತ್ತಿದೆ. ಒಂದು ಹಂತದಲ್ಲಿ ಉದ್ಯೋಗ ಭದ್ರತೆ ದೊರಕಿದ ಬಳಿಕ ಮರು ತರಬೇತಿಗೂ ಅವಕಾಶ ಕಲ್ಪಿಸಲಾಗುತ್ತದೆ.
    – ಮಣಿಮೇಖಲೈ, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts