More

    ಕೇರಳದಲ್ಲಿ ಎಸ್​ಡಿಪಿಐ ಗೂಂಡಾಗಿರಿಗೆ ಆರ್​ಎಸ್​ಎಸ್​ ಕಾರ್ಯಕರ್ತ ಬಲಿ!

    ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಮತ್ತೊಮ್ಮೆ ಸಾವಿನ ಸುದ್ದಿ ಕೇಳಿಬಂದಿದೆ. ಎಸ್​ಡಿಪಿಐ ಮತ್ತು ಆರ್​ಎಸ್​ಎಸ್​ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನೊಬ್ಬ ಮೃತನಾಗಿದ್ದಾನೆ.

    ಕೇರಳದ ಆಲಪ್ಪುಳ ಜಿಲ್ಲೆಯ ವಲಯಾರ್ ಬಳಿ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಎರಡೂ ಗುಂಪಿನ ಕಾರ್ಯಕರ್ತರು ಘರ್ಷಣೆಗೂ ಮೊದಲು ವಾಗ್ವಾದ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. ಎಸ್​ಡಿಪಿಐ ಕಾರ್ಯಕರ್ತರು ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅದರಿಂದಾಗಿ ನಂದು ಕೃಷ್ಣ(22) ಹೆಸರಿನ ಕಾರ್ಯಕರ್ತನಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವುದರೊಳಗೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಈ ಘಟನೆಯ ಬಗ್ಗೆ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ನಂದು ಕೃಷ್ಣ ಕೊಲೆಯ ಹಿಂದೆ ಪಿಎಫ್​ಐ ಕೈವಾಡವಿದೆ ಎಂದು ಪಕ್ಷದ ನಾಯಕರು ದೂರಿದ್ದಾರೆ. ಘಟನೆಯ ನಂತರ ಜಿಲ್ಲೆಯನ್ನು 12 ಗಂಟೆಗಳ ಕಾಲ ಸ್ಥಗಿತಗೊಳಿಸುವಂತೆ ಬಿಜೆಪಿ ಕರೆ ನೀಡಿತ್ತು. ಕೇಂದ್ರ ಸರ್ಕಾರದ ನಾಯಕರೂ ಈ ಘಟನೆಯ ಬಗ್ಗೆ ಆಕ್ರೋಶವನ್ನು ಟ್ವೀಟ್​ ಮೂಲಕ ಹೊರಹಾಕಿದ್ದಾರೆ.

    ಎಸ್​ಡಿಪಿಐ ಕೂಡ ಘರ್ಷಣೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದೆ. ಆರ್​ಎಸ್​ಎಸ್​ ಕಾರ್ಯಕರ್ತರ ಪೂರ್ವನಿಯೋಜಿತ ಸಂಚಿದು. ಮುಂಬರುವ ಚುನಾವಣೆಯ ಪ್ರಯುಕ್ತ ಎಸ್​ಡಿಪಿಐ​ ಎಲ್ಲ ಕ್ಷೇತ್ರದಲ್ಲೂ ಮೆರವಣಿಗೆ ನಡೆಸುತ್ತಿದೆ. ಅದೇ ರೀತಿ ವಲಯಾರ್​ನಲ್ಲಿ ಮೆರವಣಿಗೆ ನಡೆಸುವಾಗ ಆರ್​ಎಸ್​ಎಸ್​ ಕಾರ್ಯಕರ್ತರು ಅಡ್ಡ ಹಾಕಿದ್ದಾರೆ. ಅದರಿಂದಾಗಿಯೇ ಘರ್ಷಣೆ ನಡೆದಿದೆ. ನಂದು ಕೃಷ್ಣ ಕೊಲೆಯ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ಆಗಲಿ ಎಂದು ಆರ್​ಎಸ್​ಎಸ್​ ನಾಯಕರು ಹೇಳಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    9, 10, 11ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು! ನಿವೃತ್ತಿ ವಯಸ್ಸು 60 ವರ್ಷಕ್ಕೆ ಹೆಚ್ಚಿಸಿದ ತಮಿಳುನಾಡು ಸರ್ಕಾರ

    ಮತ್ತೆ ಏರಿತು ಎಲ್​ಪಿಜಿ ಸಿಲಿಂಡರ್​ ದರ! ಒಂದೇ ತಿಂಗಳಲ್ಲಿ 100 ರೂಪಾಯಿ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts