More

    ಆರ್​ಎಸ್​ಎಸ್​ ಪಥಸಂಚಲನ ರದ್ದು; ಕುತೂಹಲ ಕೆರಳಿಸಿದೆ ಮುಂದಿನ ನಡೆ!

    ಚೆನ್ನೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಹೈಕೋರ್ಟ್ ನಿರ್ಬಂಧ ಎದುರಾಗಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿದ್ದು, ಆರ್​ಎಸ್​ಎಸ್​ನ ಮುಂದಿನ ನಡೆ ಕುತೂಹಲ ಕೆರಳಿಸಿದೆ. ತಮಿಳುನಾಡಿನಲ್ಲಿ ಆರ್​ಎಸ್​ಎಸ್​ ನಾಳೆ ನಡೆಸಲು ಉದ್ದೇಶಿಸಿದ್ದ ಪಥಸಂಚಲನವು ಮದ್ರಾಸ್ ಹೈಕೋರ್ಟ್​ ನಿರ್ಬಂಧದಿಂದಾಗಿ ರದ್ದುಗೊಂಡಿದೆ.

    ತಮಿಳುನಾಡಿನ 44 ಸ್ಥಳಗಳಲ್ಲಿ ನ. 6ರ ಭಾನುವಾರ ಆರ್​ಎಸ್​ಎಸ್​ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಮೈದಾನ ಅಥವಾ ಕ್ರೀಡಾಂಗಣದಂಥ ಚೌಕಟ್ಟಿನ ಒಳಗಿನ ಪ್ರದೇಶಗಳಲ್ಲಿ ಮಾತ್ರ ಈ ಪಥಸಂಚಲನ ನಡೆಸುವಂತೆ ಮದ್ರಾಸ್ ಹೈಕೋರ್ಟ್​ ನಿನ್ನೆ ನಿರ್ಬಂಧ ಹೇರಿತ್ತು. ಹೀಗಾಗಿ ಆರ್​ಎಸ್​ಎಸ್​ ನಾಳಿನ ಪಥಸಂಚಲನವನ್ನು ರದ್ದುಗೊಳಿಸಿದೆ.

    ತೆರೆದ ಪ್ರದೇಶದಲ್ಲಿನ ಪಥಸಂಚಲನ ಕಾಶ್ಮೀರ, ಪಶ್ಚಿಮಬಂಗಾಳ, ಕೇರಳ ಮತ್ತಿತರೆಡೆ ನಡೆಯಲಿದೆ. ಆದರೆ ನ. 6ರಂದು ತಮಿಳುನಾಡಿನಲ್ಲಿ ಪಥಸಂಚಲನ ನಡೆಸುವುದಿಲ್ಲ ಎಂದು ಆರ್​ಎಸ್​ಎಸ್ ತಿಳಿಸಿದೆ. ಇನ್ನು ಕೋರ್ಟ್ ಸೂಚನೆ ಸ್ವೀಕಾರಾರ್ಹವಲ್ಲ ಎಂದಿರುವ ಆರ್​ಎಸ್​ಎಸ್​, ಆ ಕುರಿತು ಮೇಲ್ಮನವಿ ಸಲ್ಲಿಸಲಿರುವುದಾಗಿ ಹೇಳಿದೆ.

    ಹೆಚ್ಚಾಗದ ವೇತನ, ‘108’ ಸಮಸ್ಯೆ: ಮನನೊಂದು ವಿಷ ಕುಡಿದ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts