More

    ರೂ. 22 ಲಕ್ಷ ಉಳಿತಾಯ ಬಜೆಟ್

    ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 22 ಲಕ್ಷ 68 ಸಾವಿರ ರೂಪಾಯಿಗಳ ಉಳಿತಾಯ ಬಜೆಟ್ ಅನ್ನು ಮಂಗಳವಾರ ಮಂಡಿಸಲಾಯಿತು.

    ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಪಪಂ ಅಧ್ಯಕ್ಷೆ ಅಕ್ಕಮ್ಮ ಮಣ್ಣೊಡ್ಡರ ಆಯವ್ಯಯ ಮಂಡಿಸಿದರು. ವಿವಿಧ ಮೂಲಗಳಿಂದ 7 ಕೋಟಿ 71 ಲಕ್ಷ 23 ಸಾವಿರ 449 ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ 7 ಕೋಟಿ 48 ಲಕ್ಷ 55 ಸಾವಿರದ 449 ರೂಪಾಯಿ ಖರ್ಚು ಅಂದಾಜಿಸಲಾಗಿದ್ದು 22 ಲಕ್ಷ 68 ಸಾವಿರ ರೂಪಾಯಿಗಳ ಉಳಿತಾಯವಾಗಲಿದೆ. ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿ ಅನುದಾನ (ಎಸ್​ಎಫ್​ಸಿ) 31 ಲಕ್ಷ 24 ಸಾವಿರ ರೂಪಾಯಿ, ಎಸ್​ಎಫ್​ಸಿ ಸಿಬ್ಬಂದಿ ವೇತನ ಅನುದಾನ 82 ಲಕ್ಷ ರೂಪಾಯಿ, ಎಸ್​ಎಫ್​ಸಿ ವಿದ್ಯುತ್ ಅನುದಾನ 98 ಲಕ್ಷ ರೂಪಾಯಿ, ಎಸ್​ಎಫ್​ಸಿ ವಿಶೇಷ ಅನುದಾನ 1 ಕೋಟಿ 50 ಸಾವಿರ ರೂಪಾಯಿ, ಸೇವಾಂತ್ಯದ ಹಾಗೂ ಪಿಂಚಣಿ ಸೌಲಭ್ಯ ಅನುದಾನ 4 ಲಕ್ಷ ರೂಪಾಯಿ, 15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ 1 ಕೋಟಿ 31ಲಕ್ಷ ರೂಪಾಯಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರ ಅನುದಾನ 15 ಲಕ್ಷ ರೂಪಾಯಿ, ರಾಜಸ್ವ ಆದಾಯದಿಂದ 1 ಕೋಟಿ 34 ಲಕ್ಷ ರೂಪಾಯಿ, ಅಸಾಧಾರಣ ಸ್ವೀಕೃತಿಗಳಿಂದ 28 ಲಕ್ಷ 98 ಸಾವಿರ ರೂಪಾಯಿ, ಮೀಸಲು ನಿಧಿಗಳಿಂದ ಬರುವ ಅನುದಾನ (ಶೇ. 17.25, ಶೇ. 6.95, ಶೇ.7.25 ಹಾಗೂ ಶೇ. 5) 20 ಲಕ್ಷ 65 ಸಾವಿರ ರೂ., ಇತರೆ ಯೋಜನೆಗಳಿಂದ ಬರಬಹುದಾದ ಅನುದಾನಗಳು (ಎಸ್​ಜೆಎಸ್​ಆರ್​ವೈ/ನಲ್ಮ್, ಸ್ವಚ್ಛ ಭಾರತ ಯೋಜನೆ) 80 ಲಕ್ಷ ರೂಪಾಯಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು.

    ಯಾವುದಕ್ಕೆ ಎಷ್ಟು ಖರ್ಚು..?: ಘನತ್ಯಾಜ್ಯ ವಸ್ತು ನಿರ್ವಹಣೆಗೆ 44 ಲಕ್ಷ 50 ಸಾವಿರ ರೂಪಾಯಿ, ಬಿಸಿಎಂ ವಿದ್ಯಾರ್ಥಿ ನಿಲಯದ ಹಿಂದುಗಡೆಯ ಉದ್ಯಾನ ಅಭಿವೃದ್ಧಿಗೆ 17 ಲಕ್ಷ 80 ಸಾವಿರ ರೂಪಾಯಿ, ಸಾಯಿಬಾಬಾ ಗುಡಿಯ ಹತ್ತಿರ ಸಿಸಿ ರಸ್ತೆ ನಿರ್ವಣಕ್ಕೆ 10 ಲಕ್ಷ 50 ಸಾವಿರ ರೂಪಾಯಿ, 16ನೇ ವಾರ್ಡ್​ನ ಸಿನಿಮಾ ಟಾಕೀಜ್​ನಿಂದ ಗೆದೀಗೇರಿಯವರ ಖಾನಾವಳಿ ಮಾರ್ಗವಾಗಿ ಹತ್ತಿಕಟಗಿಯವರ ಗೋದಾಮಿನವರೆಗೆ ಸಿಸಿ ಚರಂಡಿ ಕಾಮಗಾರಿಗೆ 17 ಲಕ್ಷ 80 ಸಾವಿರ ರೂಪಾಯಿ, ಬಸ್ ನಿಲ್ದಾಣದಿಂದ ಅಬ್ಬಿಗೇರಿ ರಸ್ತೆಯ ಹಿರೇಕೆರೆ ಪಕ್ಕದಲ್ಲಿ ಪಾದಚಾರಿ ಮಾರ್ಗಕ್ಕೆ ಪೇವರ್ಸ್ ಜೋಡಣೆಗೆ 17 ಲಕ್ಷ 80 ಸಾವಿರ ರೂಪಾಯಿ, ವಿವಿಧ ರುದ್ರಭೂಮಿಗಳ ಸಂಪರ್ಕ ರಸ್ತೆ ಅಭಿವೃದ್ಧಿಗಾಗಿ 17 ಲಕ್ಷ 80 ಸಾವಿರ ರೂಪಾಯಿ, 9ನೇ ವಾರ್ಡ್​ನಲ್ಲಿನ ಗ್ರಂಥಾಲಯದ ಮುಂದುವರಿದ ಕಾಮಗಾರಿಗೆ 4 ಲಕ್ಷ 93 ಸಾವಿರ ರೂಪಾಯಿ, ಬಿನ್ನಾಳ ರಸ್ತೆ ಸಿಸಿ ಚರಂಡಿ ಕಾಮಗಾರಿಗೆ 5 ಲಕ್ಷ 4 ಸಾವಿರ ರೂಪಾಯಿಗಳ ಖರ್ಚು ಬರಲಿದೆ ಎಂದು ಮಾಹಿತಿ ನೀಡಿದರು.

    ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸದಸ್ಯರಾದ ಶ್ರೀಶೈಲಪ್ಪ ಬಂಡಿಹಾಳ, ಮಲಿಕಸಾಬ್ ರೋಣದ, ವೀರಪ್ಪ ಜೋಗಿ, ದಾವುದಲಿ ಕುದರಿ, ಮಲ್ಲಿಕಾರ್ಜುನಗೌಡ ಬೂಮನಗೌಡ್ರ, ರಾಚಯ್ಯ ಮಾಲಗಿತ್ತಿಮಠ, ಫಕೀರಪ್ಪ ಬಂಬ್ಲಾಪೂರ, ಮುತ್ತಪ್ಪ ನೂಲ್ಕಿ, ಜ್ಯೋತಿ ಪಾಯಪ್ಪಗೌಡ್ರ, ಮಂಜುಳಾ ಹುರಳಿ, ಸುಮಿತ್ರಾ ಕಮಲಾಪೂರ, ವಿಶಾಲಾಕ್ಷಿ ಹೊಸಮನಿ, ಬಸೀರಾಬಾನು ನದಾಫ್, ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಎಸ್.ಎ. ಜಕ್ಕಲಿ, ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ ಕಜ್ಜಿ, ಆರಿಫ್ ಮಿರ್ಜಾ, ಶಂಕ್ರಪ್ಪ ದೊಡ್ಡಣ್ಣವರ, ನಜೀಮಾ ಬೇಲೇರಿ ಇದ್ದರು. ಪಾಂಡುರಂಗ ರಾಂಪೂರ ನಿರ್ವಹಿಸಿದರು.

    ನೀರು ಸರಬರಾಜು ಯೋಜನೆಗಳಿಗೆ ರೂ. 1.10 ಕೋಟಿ

    15ನೇ ಹಣಕಾಸು ಮಾರ್ಗಸೂಚಿಗನುಸಾರ ಅವಶ್ಯವಿರುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು 1 ಕೋಟಿ 31 ಲಕ್ಷ ರೂಪಾಯಿ, ನೀರು ಸರಬರಾಜು ಯೋಜನೆಗಳಿಗೆ 1 ಕೋಟಿ 10 ಲಕ್ಷ ರೂಪಾಯಿ, ಬೀದಿ ದೀಪ ನಿರ್ವಹಣೆಗೆ 50 ಲಕ್ಷ 53 ಸಾವಿರ ರೂಪಾಯಿ, ಸಿಬ್ಬಂದಿ ವೇತನ, ರಜೆ ನಗದೀಕರಣ, ಇತರೆ ಸೌಲಭ್ಯಕ್ಕಾಗಿ 10 ಲಕ್ಷ 46 ಸಾವಿರ ರೂಪಾಯಿ, ಎಸ್​ಎಫ್​ಸಿ ಮುಕ್ತನಿಧಿ ಅನುದಾನದಲ್ಲಿ 21 ಜನ ಪೌರ ಕಾರ್ವಿುಕ ವೇತನ ಅನುದಾನ 34 ಲಕ್ಷ ರೂಪಾಯಿ, ಸೇವಾಂತ್ಯ ಹಾಗೂ ಪಿಂಚಣಿ ಸೌಲಭ್ಯಕ್ಕಾಗಿ 4 ಲಕ್ಷ ರೂಪಾಯಿ, ಸಾಮಾನ್ಯ ಆಡಳಿತ ವೆಚ್ಚ 30 ಲಕ್ಷ 35 ಸಾವಿರ ರೂಪಾಯಿ, ಮೀಸಲು ನಿಧಿಗಳ ವೆಚ್ಚಗಳು 41ಲಕ್ಷ 84 ಸಾವಿರ ರೂಪಾಯಿ, ಸರ್ಕಾರಿ ಯೋಜನೆಗಳ ವೆಚ್ಚಗಳಿಗೆ 29 ಲಕ್ಷ 50 ರೂಪಾಯಿ, ಸರ್ಕಾರಕ್ಕೆ ಭರಣಾ ಮಾಡಬೇಕಾದ ಉಪಕರಣಗಳು, ಇತರೆ 52 ಲಕ್ಷ 77 ಸಾವಿರ ರೂಪಾಯಿಗಳ ಖರ್ಚು ಬರಲಿದೆ ಎಂದು ಅಧ್ಯಕ್ಷೆ ಮಣ್ಣೋಡ್ಡರ ಬಜೆಟ್​ನ ವಿವರ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts