More

    ‘ಆರ್‌ಆರ್‌ಆರ್’ ಅಭಿಮಾನಿಗಳಿಗೆ ಮತ್ತೆ ನಿರಾಸೆ … ಸಂಕ್ರಾಂತಿಗೆ ಚಿತ್ರ ಬಿಡುಗಡೆ ಕಷ್ಟ

    ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್‌ಚರಣ್ ತೇಜ ಅಭಿನಯದ ‘ಆರ್‌ಆರ್‌ಆರ್’ ಚಿತ್ರದ ಬಿಡುಗಡೆ ಪೋಸ್ಟ್‌ಪೋನ್ ಆಗಿದೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ವೇಗವಾಗಿ ಹರಡುತ್ತಿದೆ. ಈ ಸುದ್ದಿ ಸಹಜವಾಗಿಯೇ ಚಿತ್ರಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ‘ಆರ್‌ಆರ್‌ಆರ್’ ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬ ಸುದ್ದಿ ಕಳೆದ ಮೂರ‌್ನಾಲ್ಕು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಅದಕ್ಕೆ ಕಾರಣ, ದೀಪಾವಳಿಗೆ ಬಿಡುಗಡೆಯಾಗಬೇಕಿದ್ದ ರಜನಿಕಾಂತ್ ಅಭಿನಯದ ‘ಅಣ್ಣತ್ತೆ’, ಸಂಕ್ರಾಂತಿಗೆ ಪೋಸ್ಟ್‌ಪೋನ್ ಆಗಿದ್ದು. ‘ಆರ್‌ಆರ್‌ಆರ್’ ಹೇಳಿಕೇಳಿ ಬಹಳ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಈ ಸಿನಿಮಾ ಬಿಡುಗಡೆ ಎಂದರೆ ಸಹಜವಾಗಿಯೇ ಎಲ್ಲರಿಗೂ ಭಯವಿರುತ್ತದೆ. ಜತೆಯಾಗಿ ಬಿಡುಗಡೆಯಾಗುವುದಿರಲಿ, ‘ಆರ್‌ಆರ್‌ಆರ್’ ಬಿಡುಗಡೆಯ ಸುತ್ತಮುತ್ತ, ಬೇರೆ ಯಾವುದೇ ಸಿನಿಮಾ ಬಿಡುಗಡೆ ಆಗುವುದೇ ಸಂಶಯ. ಹೀಗಿರುವಾಗ, ‘ಅಣ್ಣಾತ್ತೆ’ ಬಿಡುಗಡೆಯಾಗುತ್ತಿದೆ ಎಂದರೆ, ‘ಆರ್‌ಆರ್‌ಆರ್’ ಮುಂದಕ್ಕೆ ಹೋಗಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿತ್ತು.

    ಇದನ್ನೂ ಓದಿ: ಒಂದಲ್ಲಾ ಎರಡಲ್ಲಾ … ಅಮೇಜಾನ್ ಪ್ರೈಮ್‌ನಲ್ಲಿ ಏಳು ಚಿತ್ರಗಳ ಪ್ರೀಮಿಯರ್

    ಚಿತ್ರದ ಬಿಡುಗಡೆಯ ಕುರಿತಾಗಿ ಏನೇ ಸುದ್ದಿ ಇದ್ದರೂ, ಚಿತ್ರತಂಡದವರು ಮಾತ್ರ, ಯಾವೊಂದು ವಿಷಯವನ್ನು ಬಿಟ್ಟು ಕೊಟ್ಟಿರಲಿಲ್ಲ. ಅಂದುಕೊಂಡಂತೆ ಕೆಲಸ ಆಗುತ್ತಿದೆ ಎಂದಷ್ಟೇ ರಾಜಮೌಳಿ ಹೇಳಿಕೊಂಡು ಬಂದಿದ್ದರು. ಆದರೆ, ಇದೀಗ ನಿರ್ಮಾಪಕ ದಾನಯ್ಯ, ಚಿತ್ರ ಬಿಡುಗಡೆ ಪೋಸ್ಟ್‌ಪೋನ್ ಆಗುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.

    ಈ ಕುರಿತು ಆಂಧ್ರದ ಕೆಲವು ಮಾಧ್ಯಮಗಳ ಜತೆಗೆ ಮಾತನಾಡಿರುವ ಅವರು, ‘ಈಗಾಗಲೇ ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಕ್ಕರೆ, ಚಿತ್ರೀಕರಣ ಪ್ರಾರಂಭಿಸುವುದಕ್ಕೂ ನಾವು ಸಿದ್ಧ. ಆದರೆ, ಗ್ರಾಫಿಕ್ಸ್ ಕೆಲಸ ತುಂಬಾ ಸಮಯ ಹಿಡಿಯುತ್ತಿದೆ. ಹಾಗಾಗಿ ಸಂಕ್ರಾಂತಿಗೆ ಬಿಡುಗಡೆ ಮಾಡುವುದು ಬಹಳ ಕಷ್ಟವಾಗುತ್ತಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರ ಪೋಸ್ಟ್‌ಪೋನ್ ಆಗುವ ಸಾಧ್ಯತೆ ಇದೆ’ ಎಂದು ಹಿಂಟ್ ಕೊಟ್ಟಿದ್ದಾರೆ.

    ಇದನ್ನೂ ಓದಿ: ಕೊನೆಗೂ ಆ ಬಯೋಪಿಕ್ ಬರಲೇ ಇಲ್ಲ!

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಇದೇ ವರ್ಷದ ಜುಲೈಗೆ ಬಿಡುಗೆಡಯಾಗಬೇಕಿತ್ತು. ಆದರೆ, ಕೆಲಸ ತಡವಾಗಿದ್ದರಿಂದ, 2021ರ ಸಂಕ್ರಾಂತಿಗೆ ಬಿಡುಗಡೆ ಎಂದು ಹೇಳಲಾಯಿತು. ಹೀಗೆ ಎರಡು ಬಾರಿ ಪೋಸ್ಟ್‌ಪೋನ್ ಆಗಿದ್ದ ಚಿತ್ರ, ಈಗ ಮೂರನೆಯ ಬಾರಿಗೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಅಂತಿಮವಾಗಿ ಚಿತ್ರ ಬಿಡುಗಡೆ ಯಾವಾಗ? ಈ ಬಗ್ಗೆ ನಿರ್ದೇಶಕ ರಾಜಮೌಳಿ ಅವರೇ ಸ್ಪಷ್ಟತೆ ಕೊಡಬೇಕು.

    ಐ ಆ್ಯಮ್ ಸೋ ಪ್ರೌಡ್ ಆಫ್​ ಯೂ … ಸೋನಾಕ್ಷಿ ಬೆನ್ನು ತಟ್ಟಿದ ಆಲಿಯಾ ಭಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts