More

    ಲಕ್ಷ ಲಕ್ಷ ಫೀಸ್​ ತಗೊಂಡು ಪರೀಕ್ಷೆ ಬಂದಾಗ ಕೋರ್ಸ್​ ರಿಜಿಸ್ಟ್ರೇಶನ್​ ಆಗಿಲ್ಲ ಎಂದ ಕಾಲೇಜು..!

    ಚಿಕ್ಕಬಾಣಾವರ: ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಇರುವ ಆರ್​.ಆರ್ ಕಾಲೇಜಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದು ಕಾರಣ ಕೇಳಿದರೆ ದಂಗಾಗುತ್ತೀರಿ. ಕಾಲೇಜಿನ ಮುಂದೆ ಪ್ರತಿಭಟನೆ ಯಾಕೆ ಮಾಡ್ತಾ ಇದ್ದೀರಾ ಎಂದು ಕೇಳಿದರೆ, ಹಾಲ್ ಟಿಕೇಟ್ ಕೊಟ್ಟಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

    ವಿದ್ಯಾರ್ಥಿಗಳು, ಡಿ-ಫಾರ್ಮ್ ಕೋರ್ಸ್​ಗೆ ಎಂದು ಆರ್​.ಆರ್​ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿದ್ದಾರೆ. ಆದರೆ ಇದೀಗ ಎಲ್ಲಾ ಕಾಲೇಜುಗಳಲ್ಲೂ ಪರೀಕ್ಷೆ ನಡೆಯುತ್ತಿದ್ದರೆ ಇವರ ಕಾಲೇಜಿನಲ್ಲಿ ಇನ್ನೂ ಹಾಲ್​ ಟಿಕೆಟ್​ ನೀಡಿಲ್ಲ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸಲಿಗೆ, ಈ ವಿದ್ಯಾರ್ಥಿಗಳು ಜಾಹೀರಾತನ್ನು ನೋಡಿ ಕಾಲೇಜಿಗೆ ಸೇರಿಕೊಂಡಿದ್ದಾರೆ.

    ಜಾಹೀರಾತು ನೋಡಿ ಕಾಲೇಜು ಸೇರಿದವರ ಪೈಕಿ, ಕರ್ನಾಟಕ ಕೇರಳ ಸೇರಿದಂತೆ ವಿವಿಧ ರಾಜ್ಯಗಳ 40ಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಇದ್ದಾರೆ. ಕೋರ್ಸ್​ಗೆ ಫೀಸ್​ ಕಟ್ಟಲು ಈ ವಿದ್ಯಾರ್ಥಿಗಳು ಲಕ್ಷ ಲಕ್ಷ ಹಣ ತೆತ್ತಿದ್ದಾರೆ. ಇದೀಗ ಹಾಲ್​ಟಿಕೆಟ್​ ಇನ್ನೂ ಯಾಕೆ ನೀಡಿಲ್ಲ ಎಂದು ವಿದ್ಯಾರ್ಥಿಗಳು ಕೇಳಿದರೆ, ಡಿ-ಫಾರ್ಮ್​ ಕೋರ್ಸ್​ ಇನ್ನೂ ರಿಜಿಸ್ಟರ್​ ಆಗಿಲ್ಲ ಎಂದು ಕಾಲೇಜು ಮಂಡಳಿ ಹೇಳಿದೆ.

    ಇದರಿಂದ ಇನ್ನಷ್ಟು ಸಿಟ್ಟಾದ ವಿದ್ಯಾರ್ಥಿಗಳು ಈಗ ಕಾಲೇಜು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ವಿದ್ಯಾರ್ಥಿಗಳು ಲಕ್ಷ ಲಕ್ಷ ಫೀಸ್ ಆಸೆ ತೋರಿಸಿ ಫೇಕ್ ಕೋರ್ಸ್ ಆಫರ್ ಮಾಡಿದ್ದಾರೆ ಎಂದು ಕಾಲೇಜು ಮಂಡಳಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಕಾಲೇಜು ಮಂಡಳಿಯವರು ವಿದ್ಯಾರ್ಥಿಗಳನ್ನು ವಂಚಿಸಿದ್ದಾರೆ ಎಂದೂ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts