More

    ರೋಟರಿ ಕ್ಲಬ್‌ನಿಂದ ಸಾಮಾಜಿಕ ಕಾರ್ಯ: ಜಿಲ್ಲಾ ಗರ್ವನರ್ ಎಂ.ಕೆ.ರವೀಂದ್ರ

    ಸಂಡೂರು: ರೋಟರಿ ಕ್ಲಬ್ 118 ವರ್ಷಗಳಿಂದ ಸುಮಾರು 200 ದೇಶಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ ಎಂದು ಕ್ಲಬ್ ಜಿಲ್ಲಾ ಗರ್ವನರ್ ಎಂ.ಕೆ.ರವೀಂದ್ರ ಹೇಳಿದರು.

    ಪಟ್ಟಣದ ರೋಟರಿ ಬಾಲಭವನದಲ್ಲಿ 2023-24ರ ರೋಟರಿ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.

    ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳ ಬೆಳವಣಿಗೆಗೆ ಶ್ರಮ

    ರೋಟರಿ ಕ್ಲಬ್ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. 1985ರಲ್ಲಿ ಪೊಲೀಯೊ ನಿರ್ಮೂಲನೆಗೆ ಕೈ ಜೋಡಿಸಿತ್ತು. 2011ರಿಂದ ಒಂದು ಪೊಲೀಯೊ ಕೇಸ್ ಸಹ ವರದಿಯಾಗಿಲ್ಲ. ಕೊರೊನಾ ಎಂಬ ಭಯಾನಕ ಕಾಯಿಲೆ ಬಂದಾಗ ಸಂಸ್ಥೆಯಿಂದ ಸಾರ್ವಜನಿಕರಿಗೆ ಸಹಾಯ ಮಾಡಿದೆ. ಇದೀಗ ಸಂಡೂರು ರೋಟರಿ 50ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸ ತರಿಸಿದೆ. ಕ್ಲಬ್ ಸದಸ್ಯರ ಸಂಖ್ಯೆ ಹೆಚ್ಚಿಸಲು ಶ್ರಮಿಸಿ ಎಂದರು.

    ಇದನ್ನೂ ಓದಿ: ಪರೋಟ ಮಾರಿ ಕೋಟ್ಯಧಿಪತಿಯಾದ ತಂದೆ-ಮಗನ ಜೋಡಿ!

    ಕ್ಲಬ್ ಸಹಾಯಕ ಗರ್ವನರ್ ಜೆ.ಎಂ.ಬಸವರಾಜ, ನೂತನ ಅಧ್ಯಕ್ಷ ಕೆ.ನಾಗರಾಜ್, ಕಾರ್ಯದರ್ಶಿ ಎಚ್.ಎಂ.ಶಿವಮೂರ್ತಿ, ಮಾಜಿ ಅಧ್ಯಕ್ಷ ಎ.ಕೊಟ್ರೇಶಿ, ಉಪಾಧ್ಯಕ್ಷ ಸುರೇಶ್‌ಗೌಡ, ಖಜಾಂಚಿ ಎಂ.ವಿ.ಹಿರೇಮಠ, ಪ್ರಮುಖರಾದ ಪ್ರಕಾಶ ಜೈನ್, ಬಸವರಾಜ ಮಸೂತಿ, ಸಿ.ಕೆ.ವಿಶ್ವನಾಥ, ಬಿ.ಶಿವಕುಮಾರ್, ಎಂ.ಮಾರುತಿರಾವ್ ಬೊಂಸ್ಲೆ, ಜೆ.ಎಂ.ಅನ್ನದಾನಯ್ಯ, ಕೆ.ಎಂಕೊಟ್ರಯ್ಯ, ಡಿ.ಕೃಷ್ಣಪ್ಪ, ಕೆ.ಶಿವಪ್ಪ, ಆಶಾಲತಾ ಸೋಮಪ್ಪ, ಎಚ್.ಎಂ.ಕೊಟ್ರಮ್ಮ, ಸಿ.ಗೌರೀನಾಥ್, ಎಚ್.ಈರಣ್ಣ, ಡಿ.ಶಿವಕುಮಾರ್ ಗೌಡ, ಸುರೇಶ್ ಗೌಡ, ಎಚ್.ಎಂ.ಶಿವಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts