More

    ಸಂಸತ್ ಭವನದ ಮುಂದೆ ‘ದ್ರೌಪದಿ’ಯ ಪ್ರತಿಭಟನೆ!

    ನವದೆಹಲಿ: ನಟ ಸುಶಾಂತ್​ ಸಿಂಗ್ ನಿಗೂಢ ಸಾವಿನ ಬಳಿಕ ಬಾಲಿವುಡ್​ನಲ್ಲಿ ಉಂಟಾಗಿರುವ ಅಲ್ಲೋಲ-ಕಲ್ಲೋಲಗಳು ಸಂಸತ್ತಿನಲ್ಲೂ ಪ್ರತಿಧ್ವನಿಸಿವೆ. ಮತ್ತೊಂದೆಡೆ ಸಂಸತ್ ಭವನದ ಮುಂದೆ ಸೋಮವಾರ ಇದೇ ಹಿನ್ನೆಲೆಯಲ್ಲಿ ‘ದ್ರೌಪದಿ’ಯ ಪ್ರತಿಭಟನೆಯೂ ನಡೆದಿದೆ.

    ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿಯ ಪಾತ್ರ ವಹಿಸಿದ್ದ ನಟಿ, ಪ್ರಸ್ತುತ ರಾಜ್ಯಸಭಾ ಸದಸ್ಯೆಯೂ ಆಗಿರುವ, ಬಿಜೆಪಿಯ ರೂಪಾ ಗಂಗೂಲಿ ಅವರು ಬಾಲಿವುಡ್​ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

    ‘ಬಾಲಿವುಡ್​ ಸಾಯಿಸುತ್ತೆ, ಬಾಲಿವುಡ್​ ಲೈಂಗಿಕವಾಗಿ ಶೋಷಣೆ ನಡೆಸುತ್ತೆ’ ಎಂಬಂಥ ಧ್ವನಿ ಸಂಸತ್ ಒಳಗೆ ಕೇಳಿಬಂದರೆ, ಸಂಸತ್ ಭವನದ ಹೊರಗೆ ಸಂಸದೆ ರೂಪಾ ಗಂಗೂಲಿ ಪ್ರಕಾರ್ಡ್ಸ್​ ಹಿಡಿದು ಬಾಲಿವುಡ್ ಬೆಳವಣಿಗೆ ಕುರಿತು ಪ್ರತಿಭಟನೆ ತೋರಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts