More

    ಗುರಿಗೆ ಅನುಗುಣವಾಗಿ ಮಾನವ ದಿನಗಳ ಸೃಜನೆ ಮಾಡೋಣ : ಪಿಡಿಓ ಈರಣ್ಣ ಪತ್ತಾರ

    ರೋಣ: ಎಪ್ರೀಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ನರೇಗಾ ಕೆಲಸಗಳು ನಮ್ಮ ಗ್ರಾಮದಲ್ಲಿ ನಿಡಲಾಗುತ್ತಿದ್ದು ಗ್ರಾಮ ಪಂಚಾಯತ ಸಿಬ್ಬಂದಿಗಳು ಮತ್ತು ನರೇಗಾ ಸಿಬ್ಬಂದಿಗಳು ಹಾಗೂ ಕಾಯಕ ಬಂಧುಗಳು ಆಸಕ್ತಿಯಿಂದ ಶ್ರಮಿಸಬೇಕೆಂದು ಅಂತಾ ಹುಲ್ಲೂರು ಗ್ರಾಮ ಪಂಚಾಯತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈರಣ್ಣ ಪತ್ತಾರ ಹೇಳಿದರು..

    ಹುಲ್ಲೂರ ಗ್ರಾಮ ಪಂಚಾಯತ ಸಭಾ ಭವನದಲ್ಲಿ ನಡೆದ ಕಾಯಕ ಬಂಧುಗಳ ಸಭೆಯನ್ನು ಉದ್ದೇಶಿಸಿ ಮಾನಾಡಿದ ಅವರು ಮುಂಗಾರು ಮಳೆ ಆರಂಭವಾಗುವ ಮುನ್ನವೇ ಕೂಲಿಕಾರರಿಗೆ ಕೆಲಸ ನೀಡಿ ಗ್ರಾಮ ಪಂಚಾಯತಿ ಗೆ ಕೊಟ್ಟ ನಿಗದಿತ ಗುರಿ ಸಾಧನೆಗೆ ಒತ್ತು ನೀಡುವ ಉದ್ದೇಶ ಹೊಂದಿದ್ದೇವೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ನರೇಗಾ ಕೆಲಸಕ್ಕೆ ಬರುವ ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ಸ್ಥಳದಲ್ಲಿ ನೆರಳು, ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆ ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗುತ್ತದೆ ಅಂತಾ ತಿಳಿಸಿದರು.

    ದುಡಿಯುವ ಕೈಗಳನ್ನು ನರೇಗಾ ಕೆಲಸ ನೀಡಿ ಬಲಪಡಿಸಬೇಕು. ಬೇಸಿಗೆ ಅವಧಿಯಲ್ಲಿ ಕೃಷಿ ಚಟುವಟಿಕೆಗಳ ಇಲ್ಲದಿರುವುದು ನರೇಗಾ ಕೆಲಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಭಾಗವಹಿಸುತ್ತಾರೆ. ಯೋಜನೆಯಡಿ ಬರುವ ಕೂಲಿಕಾರರಿಗೆ ಸರಿಯಾದ ರೀತಿಯಲ್ಲಿ ಕಾಯಕ ಬಂಧುಗಳು ಸ್ಪಂದಿಸಿ ಎಂದು ತಿಳಿ ಹೇಳಿದರು. ಸದ್ಯ ನರೇಗಾ ಕೂಲಿ ಮೊತ್ತ 316 ರಿಂದ ?349 ಹೆಚ್ಚಳವಾಗಿದೆ. ಉದ್ಯೋಗ ಖಾತ್ರಿಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತದೆ. ಎನ್‍ಎಂಎಂಎಸ್ ಆ?ಯಪ್ ಇಲ್ಲದೆ ಯಾವುದೇ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲಾ, ಆದ್ದರಿಂದ ಮೇಟ್‍ಗಳು ಎನ್‍ಎಂಎಂಎಸ್ ಆ?ಯಪ್‍ನ ಮೂಲಕ ಹಾಜರಾತಿ ಹಾಕಿ, ಕೆಲಸದಲ್ಲಿ ಯಾವುದೇ ರೀತಿಯ ವಿಳಂಬವಾಗುದಂತೆ ನೋಡಿಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts