More

    ವಿರಾಟ್​ ಕೊಹ್ಲಿಯನ್ನು ಕೈ ಬಿಡಬೇಕೆಂದ ಕಪಿಲ್​ದೇವ್​​​ ಹೇಳಿಕೆಗೆ ನಾಯಕ ರೋಹಿತ್​ ಶರ್ಮಾ ತಿರುಗೇಟು

    ನವದೆಹಲಿ: ಇತ್ತೀಚೆಗೆ ವಿರಾಟ್​​ ಕೊಹ್ಲಿ ಅವರ ಕಳಪೆ ಪ್ರದರ್ಶನದಿಂದಾಗಿ ಅವರನ್ನು ಪಂದ್ಯದಿಂದ ಕೈ ಬಿಡಬೇಕೆಂದು ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಅವರ ಹೇಳಿಕೆಗೆ ನಾಯಕ ರೋಹಿತ್​ ಶರ್ಮಾ ಕಿಡಿಕಾರಿದ್ದಾರೆ.

    ಭಾರತದ ಕ್ರಿಕೆಟ್​​ ತಂಡದಲ್ಲೇ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಕ್ರಿಕೆಟಿಗರೆನಿಸಿಕೊಂಡಿದ್ದಾರೆ. ಈ ನಡುವೆ ಕಳಪೆ ಪ್ರದರ್ಶನದಿಂದ ಕೊಹ್ಲಿ ಅವರ ಜನಪ್ರಿಯತೆ ಕುಗ್ಗುತ್ತಿದ್ದೇಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

    ಕೆಲ ವರ್ಷಗಳಿಂದ ಅವರ ಪ್ರದರ್ಶನವನ್ನು ಗಮನಿಸುವುದಾದರೆ ಟಿ20 ಯಿಂದ ವಿರಾಟ್​ ಕೊಹ್ಲಿ ಅವರನ್ನು ಕೈ ಬಿಡುವುದು ಒಳಿತು ಎಂದು ಕಪಿಲ್​ ದೇವ್​ ಹೇಳಿಕೆ ನೀಡಿದ್ದರು. ಅಲ್ಲದೇ ಕೊಹ್ಲಿ ಬದಲಾಗಿ ರವಿಚಂದ್ರನ್​ ಅಶ್ವಿನ್​ ಅವರನ್ನು ಸೇರಿಸಿಕೊಳ್ಳುವುದು ಒಳಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

    ಸದ್ಯ ಈ ಹೇಳಿಕೆ ಕ್ರಿಕೆಟ್​ ಲೋಕದಲ್ಲೇ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ನಾಯಕ ಶರ್ಮಾ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕಪಿಲ್​ ದೇವ್​ ಅವರು ಹೊರಗಿನಿಂದ ಕುಳಿತು ಪಂದ್ಯ ನೋಡುತ್ತಿದ್ದಾರೆ. ಒಳಗೆ ನಮ್ಮ ಶ್ರಮ ಹೇಗಿದೆ ಎಂಬುದು ನಮಗೆ ಗೊತ್ತಿದೆ. ಸದ್ಯದಲ್ಲೇ ತಂಡವನ್ನು ಮತ್ತಷ್ಟು ಬಲಪಡಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

    ಹೊರಗಡೆ ಕುಳಿತು ಹೇಳುವವರ ಬಗ್ಗೆ ನಾವು ಪ್ರಾಮುಖ್ಯತೆ ಕೊಡುವುದಿಲ್ಲ, ನಮ್ಮ ತಂಡದ ಒಳಗಿನ ಸಮಸ್ಯೆಗಷ್ಟೇ ಜಾವು ಜವಾಬ್ದಾರರು ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಯಿಂದ ಕೊಹ್ಲಿ ಪರ ರೋಹಿತ್​ ಬ್ಯಾಟ್​ ಬೀಸಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. (ಏಜೆನ್ಸೀಸ್​)

    ಮಧ್ಯರಾತ್ರಿಯಲ್ಲಿ ಕೇರಳದ ಲೂ ಲೂ ಮಾಲ್​ನಲ್ಲಿ ಜನವೋ ಜನ, ಸಿಬ್ಬಂದಿಯೇ ಶಾಕ್​​! ಕಾರಣ ಇಲ್ಲಿದೆ

    ಜುಲೈ 21ಕ್ಕೆ ಖುದ್ದು ಹಾಜರಾಗಿ: ಇಡಿಯಿಂದ ಸೋನಿಯಾ ಗಾಂಧಿಗೆ ಹೊಸ ನೋಟಿಸ್​ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts