More

    ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ 15 ವರ್ಷ; ಭಾವುಕ ಪತ್ರ ಬರೆದ ಹಿಟ್​ಮ್ಯಾನ್ ರೋಹಿತ್ ​

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಿಟ್​ಮ್ಯಾನ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಪಾದಾರ್ಪಣೆ ಮಾಡಿ ಇಂದಿಗೆ ಸರಿಯಾಗಿ 15 ವರ್ಷ ಪೂರೈಸಿದ್ದಾರೆ. ಈ ಬಗ್ಗೆ ರೋಹಿತ್ ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.

    ರೋಹಿತ್ ಶರ್ಮಾ 23 ಜೂನ್ 2007 ರಲ್ಲಿ ಐರ್ಲೆಂಡ್ ವಿರುದ್ಧದ ಮ್ಯಾಚ್ ನಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೂ, ಮುಂದಿನ ವರ್ಷಗಳಲ್ಲಿ ಅವರು ಟೀಂ ಇಂಡಿಯಾದ ಆಧಾರ ಸ್ತಂಭವಾದರು. ಆರಂಭಿಕ ದಾಂಡಿಗನ ಸ್ಥಾನದಿಂದ ಮಧ್ಯಮ ಕ್ರಮಾಂಕದ ದಾಂಡಿಗನ ತನಕ ಬ್ಯಾಟ್‌ ಬೀಸಿ ಅನೇಕ ಸಂದರ್ಭಗಳಲ್ಲಿ ಟೀಂ ಇಂಡಿಯಾದ ಗೆಲುವಿಗೆ ಕಾರಣರಾಗಿದ್ದರು.

    ಭಾವುಕ ಸಂದೇಶ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದು 15 ವರ್ಷಗಳನ್ನು ಪೂರೈಸಿದ್ದಕ್ಕಾಗಿ, ರೋಹಿತ್ ಶರ್ಮಾ ಟ್ವಿಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಎಲ್ಲರಿಗೂ ನಮಸ್ಕಾರ, ಟೀಂ ಇಂಡಿಯಾ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಾನು ಪಾದಾರ್ಪಣೆ ಮಾಡಿ ಇಂದಿಗೆ 15 ವರ್ಷಗಳನ್ನು ಪೂರೈಸುತ್ತಿದ್ದೇನೆ. ಇದು ನನ್ನ ಜೀವನದುದ್ದಕ್ಕೂ ನಾನು ಮರೆಯಲಾಗದ ಪ್ರಯಾಣವಾಗಿದೆ ಎಂದಿದ್ದಾರೆ.

    ಈ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದಗಳು. ನಾನು ಇಂದು ಆಟಗಾರನಾಗಲು ಸಹಾಯ ಮಾಡಿದವರಿಗೆ ವಿಶೇಷ ಧನ್ಯವಾದಗಳು. ನನಗೆ ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು ಮತ್ತು ವಿಮರ್ಶಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಮೂರು ದ್ವಿಶತಕಗಳಿಸಿರುವ ಏಕೈಕ ಆಟಗಾರ: ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮ್ಯಾಚ್ ನಲ್ಲಿ 264 ರನ್ ಗಳಿಸಿದ್ದರು. ಹಾಗೆ, ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.

    ನಟ ದಿಗಂತ್ ಆರೋಗ್ಯದ ಬಗ್ಗೆ ಪತ್ನಿ ಐಂದ್ರಿತಾ ರೇ ಹೇಳಿದ್ದಿಷ್ಟು

    ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು; ಗೋವಾದಿಂದ ಬೆಂಗಳೂರಿಗೆ ಏರ್​ಲಿಫ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts