More

    ರೋಹಿಣಿ ಸಿಂಧೂರಿ ವರ್ಗಾವಣೆಗೆ ಹೆಚ್ಚಿದ ಒತ್ತಡ! ಸರ್ಕಾರದ ಮುಂದಿನ ನಡೆಯ ಬಗ್ಗೆ ಭಾರೀ ಕುತೂಹಲ

    ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಒತ್ತಡ ಹೆಚ್ಚಾಗಿದ್ದು, ಮೈಸೂರಿನ ಜನಪ್ರತಿನಿಧಿಗಳು ಸಾಮೂಹಿಕವಾಗಿ ತಿರುಗಿಬಿದಿದ್ದಾರೆ.

    ರೋಹಿಣಿ ಸಿಂಧೂರಿ ಮೈಸೂರಿಗೆ ಕಾಲಿಟ್ಟ ದಿನದಿಂದಲೂ ಶಾಸಕ ಸಾ.ರಾ. ಮಹೇಶ್​ ಒಂದಿಲ್ಲೊಂದು ಆರೋಪ ಮಾಡುತ್ತಲೇ ಇದ್ದಾರೆ. ಹುಣಸೂರು ಕಾಂಗ್ರೆಸ್​ ಶಾಸಕ ಎಚ್.ಪಿ. ಮಂಜುನಾಥ್ “ಮೈಸೂರಿನ ಎರಡನೇ ಮಹಾರಾಣಿ” ಅಂತ ಮೂದಲಿಸಿದ್ದರು.

    ಇಷ್ಟೇ ಅಲ್ಲದೆ, ಆರಂಭದಲ್ಲಿ ಹೊಗಳುತ್ತಿದ್ದ ಪ್ರತಾಪ್ ಸಿಂಹ ಈಗ ಕಂಪ್ಲೀಟ್ ಉಲ್ಟಾ ಉಡೆಯುತ್ತಿದ್ದಾರೆ. ಕರೊನಾ ವಿಚಾರದಲ್ಲಿ ರೋಹಿಣಿ ಸಿಂಧೂರಿ ಅವರನ್ನು ನಿರಂತರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.

    ಇದೀಗ ಶಿಲ್ಪಾನಾಗ್ ರಾಜೀನಾಮೆ ಬೆನ್ನಲ್ಲೇ ವರ್ಗಾವಣೆಗೆ ಮತ್ತಷ್ಟು ಒತ್ತಡ ಹೆಚ್ಚಾಗಿದೆ. ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹಾಗೂ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಸಿಂಧೂರಿ ವರ್ಗಾವಣೆಗೆ ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ.

    ಇನ್ನೊಂದಿಗೆ ಪಕ್ಷಾತೀತವಾಗಿ ಮಹಾನಗರ ಪಾಲಿಕೆ ಸದಸ್ಯರು ಸಿಂಧೂರಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೋವಿಡ್ ಕೆಲಸ ನಿಲ್ಲಿಸುವುದಾಗಿ ಪೌರಕಾರ್ಮಿಕರು ಒತ್ತಡ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾನಾಗ್ ಪರ ಸಂಘ-ಸಂಸ್ಥೆಗಳು ಭರ್ಜರಿ ಬ್ಯಾಟ್​ ಬೀಸುತ್ತಿವೆ. (ದಿಗ್ವಿಜಯ ನ್ಯೂಸ್​)

    ಸಿಂಧೂರಿ v/s ಶಿಲ್ಪಾನಾಗ್​! ಇನ್ನೆರಡು ದಿನದಲ್ಲಿ ಏನಾಗುತ್ತೆ ನೋಡಿ… ಸಚಿವರ ಈ ಮಾತಿನ ಗೂಢಾರ್ಥ ಏನು?

    18 ಪುಟಗಳ ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿ ರೋಹಿಣಿ ಸಿಂಧೂರಿ ಆರೋಪಕ್ಕೆ ಶಿಲ್ಪಾನಾಗ್​ ತಿರುಗೇಟು

    65 ಕಾರ್ಪೋರೇಟರ್​ಗಳ ಸುದ್ದಿಗೋಷ್ಠಿ: ಶಿಲ್ಪಾ ನಾಗ್ ರಾಜೀನಾಮೆ ಅಂಗೀಕರಿಸದಿರಲು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts