More

    ಮೈಸೂರಲ್ಲಿ ಕರೊನಾ ಸ್ಫೋಟ? ರೋಹಿಣಿ ಸಿಂಧೂರಿ ಆತಂಕ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಅತ್ಯಂತ ಸರಳವಾಗಿ ಮುಕ್ತಾಯಗೊಂಡಿದ್ದರೂ ನಗರದಲ್ಲಿ ಕರೊನಾ ಸ್ಫೋಟಗೊಳ್ಳುವ ಕುರಿತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆತಂಕ ವ್ಯಕ್ತಪಡಿಸಿದ್ದಾರೆ.

    ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ಕರೊನಾ ನಿಯಂತ್ರಿಸುವ ಸಲುವಾಗಿ ಈ ಬಾರಿ ದಸರಾ ಉದ್ಘಾಟನೆಗೆ 200 ಹಾಗೂ ಜಂಬೂಸವಾರಿ ವೀಕ್ಷಣೆಗೆ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ದೀಪಾಲಂಕಾರ ನೋಡುವ ಜತೆಗೆ ಫೋಟೋ ಮತ್ತು ಸೆಲ್ಫಿಗೆ ಜನರು ಮುಗಿಬಿದ್ದ ಕಾರಣ ಕರೊನಾ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇದರ ಫಲಿತಾಂಶ ಮುಂದಿನ 10 ದಿನಗಳಲ್ಲಿ ತಿಳಿಯಲಿದೆ ಎಂದರು.

    ಹಲವು ನಿಯಮ, ನಿಬಂಧನೆಗಳ ನಡುವೆ ಅರಮನೆ ಆವರಣದೊಳಗೆ ಜಂಬೂಸವಾರಿ ನಡೆಸಲಾಯಿತು. ಸಂಗೀತ ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳನ್ನು ಸೀಮಿತಗೊಳಿಸಲಾಗಿತ್ತು. ಆದರೆ ನಗರದಲ್ಲಿ ಮಾಡಲಾಗಿದ್ದ ದೀಪಾಲಂಕಾರ ನೋಡಲು ಜನರು ಆಗಮಿಸಿದ್ದರು. ಹೀಗಾಗಿ ದಸರಾ ನಂತರ ಕರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ರೋಹಿಣಿ ಸಿಂಧೂರಿ ಕಳವಳ ವ್ಯಕ್ತಪಡಿಸಿದರು.

    ಇದೀಗ ಪ್ರವಾಸಿ ತಾಣಗಳಿಗೆ ಇದ್ದ ಎಲ್ಲ ನಿರ್ಬಂಧಗಳನ್ನು ತೆರವು ಮಾಡಲಾಗಿದ್ದು, ಮುಕ್ತಗೊಳಿಸಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.

    ಆರ್​ಸಿಬಿ ಗೆಲುವಿಗಾಗಿ ರುದ್ರಾಭಿಷೇಕ

    ಕರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ! ಚುನಾವಣೆ ಬಳಿಕ ರ‍್ಯಾಂಡಮ್​ ಟೆಸ್ಟ್

    VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts