More

    ಅಭಿಮಾನಿಗಳ ಸಾವು ಪ್ರಕರಣ: ಮೃತರ ಮನೆಗೆ ಭೇಟಿ ನೀಡಿದ ಬಳಿಕ ಯಶ್ ಆಡಿದ ನೋವಿನ ಮಾತುಗಳಿವು

    ಗದಗ: ನೆಚ್ಚಿನ ನಟನ ಹುಟ್ಟುಹಬ್ಬ ಸಂಭ್ರಮ ಹಿನ್ನೆಲೆಯಲ್ಲಿ ಶುಭಾಶಯ ಕೋರುವ ಬ್ಯಾನರ್​ ಕಟ್ಟುವ ವೇಳೆ ವಿದ್ಯುತ್​ ಪ್ರವಹಿಸಿ ದುರಂತ ಅಂತ್ಯಕಂಡ ಮೂವರು ಅಭಿಮಾನಿಗಳ ಮನೆಗೆ ನಟ ಯಶ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

    ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿತು. ಮೃತರನ್ನು ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಅವಘಡದ ಸುದ್ದಿ ತಿಳಿಯುತ್ತಿದಂತೆ ಗೋವಾದಲ್ಲಿದ್ದ ನಟ ಯಶ್, ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ​ ಗದಗಿನ ಸೂರಣಗಿ ಗ್ರಾಮಕ್ಕೆ ಕಾರಿನ ಮೂಲಕ ಆಗಮಿಸಿದರು. ಬಳಿಕ ಮೃತ ಅಭಿಮಾನಿಗಳ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಮಕ್ಕಳನ್ನು ಕಳೆದುಕೊಂಡು ಗೋಳಾಡಿದ ಕುಟುಂಬಸ್ಥರನ್ನು ಕಂಡು ಯಶ್​ ಭಾವುಕರಾದರು. ಮೂವರು ಅಭಿಮಾನಿಗಳ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ತಮ್ಮ ಮಕ್ಕಳ ಮೇಲೆ ಪಾಲಕರು ಅಗಾಧ ಕನಸು ಕಂಡಿದ್ದರು. ಆದರೆ, ದುರಂತದಲ್ಲಿ ಅಕಾಲಿಕ ಮರಣ ಹೊಂದಿದ ಮಕ್ಕಳನ್ನು ನೆನೆದು ಆಕಾಶವೇ ಕಳಚಿ ಬೀಳುವಂತೆ ಪಾಲಕರು ಗೋಳಿಟ್ಟರು. ಇದನ್ನು ಕಂಡು ನಟ ಯಶ್​​ ಅಕ್ಷರಶಃ ಭಾವುಕರಾದರು. ಯಶ್​ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಪಾಲಕರು ಹೇಳುವ ಮಾತು ಕೇಳಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಭಾವುಕರಾದರು.

    ನನ್ನ ಮೇಲೆ ನನಗೇ ಬೇಸರವಾಗುತ್ತಿದೆ
    ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಯಶ್​, ನನ್ನ ಮೇಲೆ ನನಗೇ ಬೇಜಾರಾಗುತ್ತಿದೆ. ಬ್ಯಾನರ್​ ಹಾಕಲೇಬೇಕೆಂದು ನಾವು ಎಂದಿಗೂ ಇಷ್ಟಪಡುವುದಿಲ್ಲ. ಬರ್ತಡೇ ಆಚರಣೆ ಮಾಡ್ಬೇಡಿ ಎಂದು ಹೇಳಿದರೂ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಅಭಿಮಾನಿಗಳು ಖುಷಿಯಾಗಿದ್ರೆ ಅದೇ ನಮಗೆ ಸಂತೋಷ. ಇನ್ನು ಮುಂದೆ ಯಾರೂ ಕೂಡ ಬ್ಯಾನರ್​​ ಕಟ್ಟಬೇಡಿ ಎಂದು ನಟ ಯಶ್​ ಅಭಿಮಾನಿಗಳಿಗೆ ಕರೆ ಕೊಟ್ಟರು. ಅಲ್ಲದೆ, ಮೃತ ಅಭಿಮಾನಿಗಳ ಕುಟುಂಬಕ್ಕೆ ಏನು ನೆರವು ಬೇಕೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಸರ್ಕಾರದಿಂದ ಪರಿಹಾರ
    ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

    ಯಶ್ ಬರ್ತಡೇ ಬ್ಯಾನರ್​ ಕಟ್ಟುವಾಗ ವಿದ್ಯುತ್​ ಪ್ರವಹಿಸಿ ಮೂವರು ಸಾವು; ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

    ಮಾದಕ ಫೋಟೋ ಹರಿಬಿಟ್ಟ ಹರ್ಭಜನ್​ ಪತ್ನಿ! ಗೀತಾ ಬಸ್ರ​ ಹಾಟ್​ ಅವತಾರ ಕಂಡು ಫ್ಯಾನ್ಸ್​ ಕ್ಲೀನ್​ ಬೋಲ್ಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts