More

    VIDEO| 43ನೇ ವಸಂತಕ್ಕೆ ಕಾಲಿಟ್ಟ ದಚ್ಚು: ಬಹುನಿರೀಕ್ಷಿತ ರಾಬರ್ಟ್​ ಚಿತ್ರದ ಟೀಸರ್​ ಗಿಫ್ಟ್​!

    ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು ನೀಡುವ ಉಡುಗೊರೆಗೆ ಪ್ರತಿಯಾಗಿ ತಮ್ಮ ಬಹುನಿರೀಕ್ಷಿತ “ರಾಬರ್ಟ್​” ಚಿತ್ರದ ಟೀಸರ್​ ಅನ್ನು ಕಾಣಿಕೆಯನ್ನಾಗಿ ದಚ್ಚು ನೀಡಿದ್ದಾರೆ.

    ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತುಕೊಟ್ಟರೆ ದಶರಥರಾಮ, ಪ್ರೀತಿಯಿಂದ ಬಂದರೆ ಜಾನಕಿ ರಾಮ, ತಿರುಗಿ ಬಿದ್ದರೆ…. ಎಂಬ ಹೆಣ್ಣಿನ ಹಿನ್ನೆಲೆ ಧ್ವನಿ ಇರುವ ಖಡಕ್​ ಡೈಲಾಗ್​ ಮೂಲಕ ಟೀಸರ್ ಆರಂಭವಾಗುತ್ತದೆ.

    ಟೀಸರ್​ನಲ್ಲಿ ಸಾಹಸ ದೃಶ್ಯವನ್ನೇ ಹೈಲೈಟ್​ ಮಾಡಲಾಗಿದ್ದು, ಚಿತ್ರದಲ್ಲಿ ದರ್ಶನ್​ ಅವರು ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುಳಿವು ಸಿಗುತ್ತದೆ. ಕೊನೆಯಲ್ಲಿ ನಾನು ಚತುರ್ದಶಕ ಭುವನ ಭಯಂಕರನಾದ ಲಂಕೇಶ್ವರ ದಶಕಂಠ ರಾವಣ ಎಂದು ಖಡಕ್​ ಡೈಲಾಗ್​ನಿಂದಲೇ ಟೀಸರ್​ ಕೊನೆಗೊಳ್ಳುತ್ತದೆ. ಒಟ್ಟಾರೆ ಟೀಸರ್​ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹುಟ್ಟಿಸುವುದಂತು ಸತ್ಯವಾಗಿದೆ.

    ಚಿತ್ರವನ್ನು ತರುಣ್​ ಸುಧೀರ್​ ಅವರು ನಿರ್ದೇಶಿಸಿದ್ದು, ಉಮಾಪತಿ ಅವರು ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತವಿದ್ದು, ಬಿಡುಗಡೆಗೆ ಸಜ್ಜಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts