ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ ನಾಳೆಯಿಂದ (ಮಾರ್ಚ್ 29) ‘ರಾಬರ್ಟ್’ ಚಿತ್ರತಂಡವು ನಾಲ್ಕು ದಿನಗಳ ಕಾಲ ವಿಜಯ ಯಾತ್ರೆ ನಡೆಸಬೇಕಿತ್ತು. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಹಾಸನ, ಮೈಸೂರು, ಮಂಡ್ಯ ಸೇರಿದಂತೆ 13 ನಗರಗಳಿಗೆ ಭೇಟಿ ಕೊಟ್ಟು, ಚಿತ್ರವನ್ನು ಗೆಲ್ಲಿಸಿರುವ ಪ್ರೇಕ್ಷಕರಿಗೆ ಧನ್ಯವಾದ ಹೇಳಬೇಕಿತ್ತು. ಆದರೆ, ಇದೀಗ ಆ ವಿಜಯ ಯಾತ್ರೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಕಾರಣ, ಎರಡನೇ ಅಲೆ.
ರಾಜ್ಯದಲ್ಲಿ ಕರೊನಾ ಎರಡನೇ ಅಲೇ ಹೆಚ್ಚಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರಬಾರದು ಎಂಬ ನಿಯಮವನ್ನು ರೂಪಿಸಲಾಗಿದೆ. ಹಾಗಾಗಿ, ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಮತ್ತು ಮುಂದೆ ಸಿನಿಮಾ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ, ‘ರಾಬರ್ಟ್’ ಚಿತ್ರತಂಡವು ವಿಜಯ ಯಾತ್ರೆಯನ್ನು ಮುಂದೂಡುವುದಕ್ಕೆ ನಿರ್ಧರಿಸಿದೆ.
ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಿ, ಕರೊನಾ ಎರಡನೆಯ ಅಲೆ ಸ್ವಲ್ಪ ಕಡಿಮೆಯಾದ ನಂತರ ‘ರಾಬರ್ಟ್’ ವಿಜಯ ಯಾತ್ರೆ ಹೊಸದಾಗಿ ಆಯೋಜಿಸುವುದಕ್ಕೆ ಚಿತ್ರತಂಡ ತೀರ್ವನಿಸಿದ್ದು, ಈ ಕುರಿತು ದರ್ಶನ್ ಸದ್ಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಅಧಿಕೃತವಾಗಿ ಘೊಷಿಸಲಿದ್ದಾರೆ ಎಂದು ಹೇಳಲಾಗಿದೆ.
ಎದೆಯೊಳಗೆ ಚಾಕು ಇದ್ದಿದ್ದು ಒಂದು ವರ್ಷವಾದರೂ ಇವನಿಗೆ ಗೊತ್ತೇ ಆಗಲಿಲ್ಲ!
ಧರ್ಮಸ್ಥಳದ ಧರ್ಮಾಧಿಕಾರಿಯವರ ಸರಳತೆಗೆ ಮಾರುಹೋದ ಬೈಕರ್; ನಗುನಗುತ್ತಲೇ ಮಾತಾಡಿ ತಿಂಡಿಯನ್ನೂ ಕೊಟ್ಟ ವೀರೇಂದ್ರ ಹೆಗ್ಗಡೆ