More

    ಧೂಮ್​​ ಚಿತ್ರದ ಪ್ರೇರಣೆಯಿಂದ ಶಾಲೆಗೆ ಕನ್ನ: ಕಳ್ಳತನ ಬಳಿಕ ಬೋರ್ಡ್​​ ಮೇಲೆ ಬರೆದಿದ್ದು ನೋಡಿ ಶಿಕ್ಷಕರೇ ಶಾಕ್​!

    ಭುವನೇಶ್ವರ: ಬಾಲಿವುಡ್​​ನಲ್ಲಿ ತೆರೆ ಕಂಡಿರುವ ಧೂಮ್​ ಚಿತ್ರದ ಪ್ರೇರಣೆಯಿಂದಈ ಖತರ್ನಾಕ್​ ಕಳ್ಳರು ಮಾಡಿರುವ ಕಳ್ಳತನಕ್ಕೆ ಎಂತಹವರೂ ಬೆರರಾಗುತ್ತಾರೆ.

    ಹೈಫ್ರೊಫೈಲ್​ ಕಳ್ಳತನ ಮಾಡುವುದು ಹೇಗೆ, ಅದಕ್ಕಾಗಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬುದನ್ನು ಹಿಂದಿಯಲ್ಲಿ ತೆರೆ ಕಂಡ ಧೂಮ್​ ಸರಣಿ ಚಿತ್ರಗಳೇ ಉದಾಹರಣೆಯಾಗಿವೆ. ಭಾರೀ ಹಿಟ್​ ಆದ ಈ ಚಿತ್ರಗಳು ಇದೀಗ ಕಳ್ಳತನಕ್ಕೆ ದಾರಿ ಮಾಡಿಕೊಡುತ್ತಿದೆ.

    ಧೂಮ್​ ಚಿತ್ರ ವೀಕ್ಷಿಸಿದ ಕಳ್ಳರು, ಒಡಿಶಾದ ಶಾಲಾ ಕೊಠಡಿಗೆ ಶುಕ್ರವಾರ ರಾತ್ರಿ ನುಗ್ಗಿ ಅಲ್ಲಿದ್ದ ಕಂಪ್ಯೂಟರ್ಸ್​​, ಪ್ರಿಂಟರ್ಸ್​​ ಹಾಗೂ ಎಲೆಕ್ಟ್ರಾನಿಕ್​ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಿರುವುದಷ್ಟೇ ಅಲ್ಲ, ಬದಲಾಗಿ ಬೋರ್ಡ್​ ಮೇಲೆ ಧೂಮ್​​-4, ಶೀಘ್ರದಲ್ಲೇ ಮತ್ತೆ ಬರುತ್ತೇವೆ ಎಂದು ಬರೆದಿದ್ದಾರೆ.

    ಮಾರನೇ ದಿನ ಶಾಲಾ ಕೊಠಡಿಯನ್ನು ತೆರೆದ ಶಿಕ್ಷಕರು ಇದನ್ನು ನೋಡಿ ದಂಗಾಗಿದ್ದಾರೆ. ಅರೇ ಕಳ್ಳತನ ಮಾಡಿದ್ದಲ್ಲದೇ ಮತ್ತೆ ಬರುತ್ತೇನೆ ಎಂದು ಹೇಳಿರುವ ಈ ಕಳ್ಳರ ಧೈರ್ಯವನ್ನು ಮೆಚ್ಚಲೇಬೇಕಿದೆ ಎಂದು ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಹುಬ್ಬೇರಿಸಿದ್ದಾರೆ.

    ಖತಿಗುಡಾದ ಇಂದ್ರಾವತಿ ಪ್ರೌಢ ಶಾಲೆಯಲ್ಲಿ ಈ ಕಳ್ಳತನ ನಡೆದಿದೆ, ಶಾಲೆಯಲ್ಲಿದ್ದ ಪ್ರಿಂಟರ್​, ಕಂಪ್ಯೂಟರ್​ ಕಳವು ಮಾಡಿದ್ದಲ್ಲದೇ, ನಿಮಗೆ ತಾಕತ್ತಿದ್ದರೆ ನಮ್ಮನ್ನು ಹಿಡಿಯಿರಿ ಎಂದು ಬೋರ್ಡ್​ ಮೇಲೆ ಬರೆದು ಸವಾಲು ಕೂಡ ಹಾಕಿದ್ದಾರೆ.ಸದ್ಯ ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಸರಬೇಶ್ವರ್​ ಬೆಹ್ರಾ ಅವರು ಖತಿಗುಡದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಧೂಮ್​ ಕಳ್ಳರನ್ನು ಪೊಲೀಸರು ಹಿಡಿಯುವರೇ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​)

    ಹಣಕ್ಕಾಗಿ ಮನೆ ಮಾಲೀಕನ ಮಗನನ್ನೇ ಕಿಡ್ನ್ಯಾಪ್​ ಮಾಡಿ ವಿಫಲ ಯತ್ನ, 24 ಗಂಟೆಯಲ್ಲೇ ಸೆರೆಸಿಕ್ಕ ಖದೀಮ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts