More

    ಅಳಗೋಡಿನ ಕಲ್ಲುಕೋರೆಯಲ್ಲಿ ಮತದಾನ ಬಹಿಷ್ಕಾರ ನಿರ್ಧಾರ

    ಕಳಸ: ತೋಟದೂರು ಗ್ರಾಪಂನ ತನೂಡಿ ಗ್ರಾಮದ ಅಳಗೋಡಿನ ಕಲ್ಲುಕೋರೆ ರಸ್ತೆ ಗ್ರಾಮಸ್ಥರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು, ಅನಿವಾರ್ಯವಾಗಿ ಮತದಾನ ಬಹಿಷ್ಕಾರದ ತೀರ್ಮಾನ ಮಾಡಿದ್ದಾರೆ.

    ಕಳಸ-ಬಾಳೆಹೊನ್ನೂರು ಮಧ್ಯೆ ಕಗ್ಗನಳ್ಳದ ಮುಖ್ಯ ರಸ್ತೆಯಿಂದ 8 ಕಿಮೀ ದೂರ ಇರುವ ಈ ಗ್ರಾಮದಲ್ಲಿ 40 ಕುಟುಂಬಗಳಿವೆ. ಎನ್.ಆರ್.ಪುರ ತಾಲೂಕಿನ ಗಡಿ ಗ್ರಾಮವಾದ ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ.

    ಗ್ರಾಮಕ್ಕೆ ತೆರಳುವ 4 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಅವ್ಯವಸ್ಥೆಯಿಂದ ವಾಹನಗಳು ಗ್ರಾಮಕ್ಕೆ ತೆರಳುವುದಿಲ್ಲ. ದಿನ ನಿತ್ಯ ಮನೆಗೆ ಬೇಕಾದ ವಸ್ತುಗಳನ್ನು ಹೊತ್ತುಕೊಂಡೇ ಸಾಗಬೇಕು. ವಾಹನ ಸೌಕರ್ಯ ಇಲ್ಲದ್ದರಿಂದ ಇಲ್ಲಿನ ಮಕ್ಕಳು ಕಳಸದ ವಿದ್ಯಾರ್ಥಿ ನಿಲಯದಲ್ಲಿ ಇದ್ದು ವಿದ್ಯಾಭ್ಯಾಸ ಮಾಡುತ್ತಾರೆ.

    ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ನೈಸರ್ಗಿಕ ನೀರನ್ನು ಬಳಸುವಂತಾಗಿದೆ. ಊರಿನ ಸಂಪರ್ಕಕ್ಕಾಗಿ ಕಾಲುಸಂಕ ನಿರ್ವಿುಸಲಾಗಿದೆ. ಇದು ಕೂಡ ಶಿಥಿಲಗೊಂಡಿದ್ದು, ಸರ್ಕಸ್ ಮಾಡಿಕೊಂಡೇ ಸಾಗಬೇಕು. ಈ ಗ್ರಾಮಕ್ಕೆ ದೂರವಾಣಿ ಸಂಪರ್ಕವೂ ಇಲ್ಲ. ಇಲ್ಲಿಯ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗಳು ಗಗನಕುಸುಮ.

    ಬಹಳಷ್ಟು ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ನಮ್ಮ ಪರಿಸ್ಥಿತಿ ಶಾಸಕರ ಮನೆ ಬಾಗಿಲಿಗೆ ತೆರಳಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಕೂಡ ಗಮನಹರಿಸಿಲ್ಲ. ಹಲವು ಬಾರಿ ಗ್ರಾಪಂನಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರೂ ನಮ್ಮನ್ನು ಕಡೆಗಣಿಸಲಾಗಿದೆ. ಈ ಎಲ್ಲ ಕಾರಣದಿಂದ ಬೇಸತ್ತು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts