More

    ಶಿರಾಡಿ ಹೆದ್ದಾರಿ ಸಮಗ್ರ ಅಭಿವೃದ್ಧಿ ಕೆಸಿಸಿಐನಿಂದ ಪ್ರಧಾನಿ, ಗಡ್ಕರಿಗೆ ಪತ್ರ

    ಮಂಗಳೂರು: ಬೆಂಗಳೂರು ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಶಿರಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಭೂಕುಸಿತ ಘಟನೆಗಳು ಪ್ರತಿವರ್ಷ ಸಾಮಾನ್ಯವಾಗಿದ್ದು, ಈ ಮಾರ್ಗದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಪ್ರಧಾನ ಮಂತ್ರಿ ಕಚೇರಿ ಮತ್ತು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆಯಲಾಗಿದೆ.

    ವಾಹನ ಸಂಚಾರ ನಿಷೇಧಿಸಿರುವ ಪರಿಣಾಮ ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶ ಹಾಗೂ ತಮಿಳುನಾಡು ನಡುವಿನ ಸಂಪರ್ಕವೂ ಕಡಿತವಾಗಿದೆ. ಪ್ರತಿನಿತ್ಯ 150ಕ್ಕೂ ಅಧಿಕ ಬುಲೆಟ್ ಟ್ಯಾಂಕರ್ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈಗ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಜತೆಗೆ ಕರಾವಳಿಗೆೆ ಕೃಷಿ ಉತ್ಪನ್ನಗಳ ಪೂರೈಕೆಯಲ್ಲೂ ಸಮಸ್ಯೆಯಾಗಿದೆ.

    ನವ ಮಂಗಳೂರು ಬಂದರು, ಎಂಆರ್‌ಪಿಎಲ್, ಭೂಗರ್ಭ ತೈಲ ಸಂಗ್ರಹಾಗಾರ, ಕಾರವಾರದ ನೌಕಾನೆಲೆ ಮೊದಲಾದವುಗಳ ಮೇಲೂ ಇದು ನೇರ ಪರಿಣಾಮ ಬೀರಲಿದೆ. ದೇಶದ ಆರ್ಥ ವ್ಯವಸ್ಥೆಯ ಮೇಲೂ ಹೊಡೆತ ನೀಡಲಿದೆ. ಆದ್ದರಿಂದ ತಕ್ಷಣಕ್ಕೆ ತಾತ್ಕಾಲಿಕ ದುರಸ್ತಿ ಮಾಡುವುದರೊಂದಿಗೆ ಹೆದ್ದಾರಿಯ ಸಮಗ್ರ ಅಭಿವೃದ್ಧಿಗೆ ಮುಂದಾಗಿ, ಶಾಶ್ವತವಾಗಿ ಸಮಸ್ಯೆ ನಿವಾರಿಸಬೇಕು ಎಂದು ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts