ಕೆಸರು ಗದ್ದೆಯಂತಾದ ರಸ್ತೆ

blank

ನರೇಗಲ್ಲ: ಸಮೀಪದ ಡ.ಸ. ಹಡಗಲಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಹಿಂಭಾಗದ ರಸ್ತೆ ಅಕ್ಷರಶಃ ಕೆಸರು ಗದ್ದೆಯಂತಾಗಿದೆ. ರಸ್ತೆ ಬದಿಯಲ್ಲಿ ಜಾಲಿ ಗಿಡಗಳು ಬೆಳೆದು ಮನುಷ್ಯರು ಓಡಾಡದಂತಹ ಸ್ಥಿತಿ ನಿರ್ವಣವಾಗಿದೆ.

ಗ್ರಂಥಾಲಯದ ಪಕ್ಕದಲ್ಲಿ ಜಲ ಸಂಗ್ರಹಾಗಾರದ ಮೇಲ್ತೊಟ್ಟಿ ಇದ್ದು, ಅದಕ್ಕೆ ಜೋಡಿಸಲಾದ ಪೈಪ್​ಗಳಿಂದ ನೀರು ಸೋರುತ್ತಿದೆ. ಗ್ರಾಮಕ್ಕೆ ನೀರು ಪೂರೈಸುವ ಪೈಪ್​ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ನೀರು ರಸ್ತೆಗೆ ಹರಿದ ಪರಿಣಾಮ ರಸ್ತೆಯು ಸಂಪೂರ್ಣ ಹಾಳಾಗಿ, ದೊಡ್ಡ ಗುಂಡಿಗಳು ನಿರ್ವಣವಾಗಿವೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವಾರು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ನೀರು ಸಂಗ್ರಹವಾಗಿದ್ದರಿಂದ ರೋಗ ಭೀತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಪೈಪ್​ಲೈನ್ ಹಾಗೂ ರಸ್ತೆ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರಾದ ಜಗದೀಶ ಅರವಟಗಿಮಠ, ಬಸಯ್ಯ ಅರವಟಗಿಮಠ, ಬಸವರಾಜ ಅಂಗಡಿ, ಗವಿಸಿದ್ದಯ್ಯ ಅರವಟಗಿಮಠ ಆಗ್ರಹಿಸಿದ್ದಾರೆ.

ಡ.ಸ. ಹಡಗಲಿ ಗ್ರಾಮದ ಸಾರ್ವಜನಿಕ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಘಟಕದ ಹಿಂಭಾಗದ ರಸ್ತೆ ಅಭಿವೃದ್ಧಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ನಿರ್ಣಯಿಸಲಾಗಿದೆ. ಇನ್ನೊಂದು ವಾರದಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತದೆ.

| ಸುನೀಲ ಮುನವಳ್ಳಿ ಡ.ಸ. ಹಡಗಲಿ ಪಿಡಿಒ

ಕಿತ್ತು ಹೋದ ದಾರಿ, ಸಂಚಾರಕ್ಕೆ ತೊಂದರೆ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ-ಗೋವನಾಳ ಗ್ರಾಮ ಸಂರ್ಪಸುವ 6 ಕಿಮೀ ರಸ್ತೆ ಡಾಂಬರೀಕರಣ ಕಿತ್ತು ರಸ್ತೆ ಅಸ್ಥಿಪಂಜರದಂತಾಗಿದ್ದರಿಂದ ಈ ಭಾಗದ ಜನರು, ರೈತರ ಸಂಚಾರಕ್ಕೆ ತೊಂದರೆಯಾಗಿದೆ. 2017ರಲ್ಲಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ರಸ್ತೆ ದುರಸ್ತಿಗೊಳಿಸಲಾಗಿದ್ದರೂ ಕಳೆಪೆ ಕಾಮಗಾರಿ ಜತೆಗೆ ನಿಯಮ ಮೀರಿ ಮರಳು, ಜಲ್ಲಿಕಲ್ಲು, ಎಂ. ಸ್ಯಾಂಡ್ ಸಾಗಿಸುವ ವಾಹನಗಳ ಅಬ್ಬರಕ್ಕೆ ಒಂದೇ ವರ್ಷದಲ್ಲಿ ರಸ್ತೆ ಕಿತ್ತು ಹಾಳಾಗಿದೆ. ಈ ಕುರಿತು ಅನೇಕ ಸಲ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗನಕ್ಕೆ ತಂದು ಒತ್ತಾಯಿಸಿದರೂ ಗುತ್ತಿಗೆದಾರರು ಕಾಟಾಚಾರಕ್ಕೆ ಎಂಬಂತೆ ದುರಸ್ತಿ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೂರಣಗಿ, ಬೆಳ್ಳಟ್ಟಿಯಿಂದ ಶಿಗ್ಲಿ-ಗೋವನಾಳ ಮಾರ್ಗವಾಗಿ ಸವಣೂರ ಸಂರ್ಪಸುವ ಗ್ರಾಮಗಳ ಜನರು ಮತ್ತು ಶಿಗ್ಲಿ, ಗೋವನಾಳ ಗ್ರಾಮದ ರೈತರು, ಬೈಕ್, ಕಾರು ಸವಾರರು ನಿತ್ಯ ಈ ರಸ್ತೆಯಲ್ಲಿ ಎದ್ದುಬಿದ್ದು ಸಾಗುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಗುವುದರೊಳಗೆ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಿಗ್ಲಿಯ ರಾಜು ಒಲೇಕಾರ, ಶಿವಾನಂದ ಮೂಲಿಮನಿ, ಗೋವನಾಳದ ಫಕೀರಗೌಡ ಕರೆಗೌಡ್ರ ಆಗ್ರಹಿಸಿದ್ದಾರೆ.

ರಸ್ತೆ ಮರುಡಾಂಬರೀಕರಣಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಭಾರವಾದ ವಾಹನಗಳ ಅನಿಯಮಿತ ಸಂಚಾರದಿಂದ ರಸ್ತೆ ಹದಗೆಡಲು ಕಾರಣವಾಗಿದೆ. ಅನುದಾನ ಮಂಜೂರಾದ ಕೂಡಲೆ ರಸ್ತೆ ದುರಸ್ತಿ ಮಾಡಿಸಲಾಗುವುದು.

| ಬಸವರಾಜ ಎಚ್ ಪಿಡಬ್ಲ್ಯುಡಿ ಎಇಇ

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…