More

    ರಸ್ತೆ ವಿಸ್ತರಣೆ ಕಾರ್ಯಕ್ಕೆ ಗ್ರಹಣ

    ಲಕ್ಷೆ್ಮೕಶ್ವರ: ಪಟ್ಟಣದ ಸೋಮೇಶ್ವರ ಪಾದಗಟ್ಟಿಯಿಂದ-ಹಳೇ ಬಸ್​ನಿಲ್ದಾಣದವರೆಗಿನ ರಸ್ತೆ ವಿಸ್ತರಣೆ ಕಾರ್ಯಕ್ಕೆ ಕಳೆದ ಮೂರು ವರ್ಷಗಳ ಹಿಂದೆಯೇ ಚಾಲನೆ ನೀಡಿದ ಪುರಸಭೆ ಮತ್ತೆ ಕಣ್ಣೆತ್ತಿಯೂ ನೋಡಿಲ್ಲ.

    ಈ ರಸ್ತೆಯಲ್ಲಿ ನಿತ್ಯ ಉಂಟಾಗುತ್ತಿರುವ ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ, ರಸ್ತೆಯ ಎರಡೂ ಬದಿಯಲ್ಲಿ ಮಾರ್ಕಿಂಗ್ ಮಾಡಿ ಅಂಗಡಿಗಳನ್ನು, ಮನೆಗಳನ್ನು ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅದರನ್ವಯ ಆಸ್ತಿ ಮಾಲೀಕರು ಸ್ವತಃ ಅಂಗಡಿ, ಮನೆ ತೆರವುಗೊಳಿಸಿ ಅಭಿವೃದ್ಧಿಗೆ ಸಾಥ್ ನೀಡಿದರು. ಹಾಗಂತ ಮೂರು ವರ್ಷ ಕಳೆದರೂ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ.

    ಇತ್ತ ಅಭಿವೃದ್ಧಿಯೂ ಇಲ್ಲ, ಅತ್ತ ಟ್ರಾಫಿಕ್ ಕಿರಿಕಿರಿಯೂ ತಪ್ಪಿಲ್ಲವೆಂದು ಜನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದ್ದ ಅಂಗಡಿ, ಮನೆ ಕೆಡವಿಕೊಂಡು ಅತಂತ್ರರಾಗಿರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಅಂಗಡಿಗಳನ್ನು ತೆರವು ಮಾಡಿರುವ ತಾವು ಹೇಗೆ ಜೀವನ ನಿರ್ವಹಣೆ ಮಾಡಬೇಕೆಂದು ಪ್ರಶ್ನಿಸುತ್ತಿದ್ದಾರೆ.

    ಅಗಲೀಕರಣಕ್ಕಾಗಿ ರಸ್ತೆ ಪಕ್ಕದ ಅಂಗಡಿ-ಮನೆಗಳನ್ನು ತೆರವುಗೊಳಿಸಿಕೊಂಡಿದ್ದರಿಂದ ತೆರೆದ ಚರಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಮಾರ್ಗದಲ್ಲಿ ಆಸ್ಪತ್ರೆ, ಬ್ಯಾಂಕ್, ಹೋಟೆಲ್, ಕೃಷಿ ಪರಿಕರ ಮಾರಾಟ ಅಂಗಡಿಗಳು ಇರುವುದರಿಂದ ರ್ಪಾಂಗ್ ಸಮಸ್ಯೆ ಉಲ್ಭಣಿಸಿದೆ. ರಸ್ತೆಯ ಅಂದ ಹದಗೆಟ್ಟಿದ್ದು ಉದ್ದೇಶಿತ ಕಾರ್ಯ ಮೂಲೆಗುಂಪಾಗಿದೆ. ಈ ರಸ್ತೆ ಸೇರಿ ಪಟ್ಟಣದ ಪ್ರಮುಖ ರಸ್ತೆಗಳ ವಿಸ್ತರಣೆ ಗೆ ಪುರಸಭೆಯ ಹೊಸ ಆಡಳಿತ ಮಂಡಳಿಯಾದರೂ ಆಸಕ್ತಿ ತೋರಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

    ಅಂಗಡಿ, ಮನೆಗಳನ್ನು ತೆರವುಗೊಳಿಸಿ ಮೂರು ವರ್ಷ ಕಳೆದರೂ ರಸ್ತೆ ವಿಸ್ತರಣೆಯಾಗಿಲ್ಲ. ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಪುರಸಭೆ ಚಿತ್ತಹರಿಸಿ ನಿತ್ಯದ ಕಿರಿಕಿರಿ ತಪ್ಪಿಸಬೇಕು. ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು.
    | ಶಕ್ತಿ ಕತ್ತಿ, ಶಿವು ಮೆಕ್ಕೆ ವ್ಯಾಪಾರಸ್ಥರು, ಲಕ್ಷೆ್ಮೕಶ್ವರ

    ಪಾದಗಟ್ಟಿಯಿಂದ- ಹಳೇ ಬಸ್ ನಿಲ್ದಾಣದ ವಿಸ್ತರಣೆಗೊಳಿಸುವ ರಸ್ತೆಯ ಎರಡೂ ಬದಿ ಚರಂಡಿ ನಿರ್ವಣಕ್ಕಾಗಿ ನಗರೋತ್ಥಾನ ಯೋಜನೆಯಡಿ 50 ಲಕ್ಷ ರೂ. ಮಂಜೂರಾಗಿದೆ. ಪುರಸಭೆ ಆಡಳಿತ ಮಂಡಳಿ ಸರ್ವ ಸದಸ್ಯರ ಸಭೆಯಲ್ಲಿ ಈ ಬಗ್ಗೆ ರ್ಚಚಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು.
    | ಶಂಕರ ಹುಲ್ಲಮ್ಮನವರ ಮುಖ್ಯಾಧಿಕಾರಿ ಪುರಸಭೆ, ಲಕ್ಷೆ್ಮೕಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts