More

    ರಸ್ತೆ ವಿಭಜಕದಿಂದ ಸಾರ್ವಜನಿಕರಿಗೆ ಅನುಕೂಲ

    ಮಸ್ಕಿ: ಪಟ್ಟಣದಲ್ಲಿ ಇತ್ತೀಚಿಗೆ ವಾಹನ ದಟ್ಟಣೆ ಅಧಿಕವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ವಿಭಜಕ ನಿರ್ಮಿಸಲಾಗುತ್ತಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

    ಪಟ್ಟಣದ ಗಚ್ಚಿನಮಠದ ಮುಂಭಾಗದಲ್ಲಿ 10 ಕೋಟಿ ವೆಚ್ಚದ ರಸ್ತೆ ವಿಭಜಕ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ಮಾಡಿ ಮಾತನಾಡಿದರು. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಜನದಟ್ಟಣೆ ಮತ್ತು ವಾಹನ ಸಂಚಾರ ಹೆಚ್ಚಾಗಿದೆ. ಸುಗಮ ಸಂಚಾರಕ್ಕಾಗಿ ಡಿವೈಡರ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ವಿಭಜಕ ನಿರ್ಮಾಣದಿಂದ ರಸ್ತೆ ದ್ವಿಪಥವಾಗಿ ವಾಹನ ಸವಾರರ ಸಂಚಾರಕ್ಕೆ ಅನುಕೂಲವಾಗಲಿದ್ದು, ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ. ಪಟ್ಟಣದ ಸೌಂದರ್ಯವೂ ಹೆಚ್ಚಲಿದೆ ಎಂದರು. ಪ್ರಮುಖರಾದ ಅಶೋಕ ಠಾಕೂರು, ಶಿವಶಂಕ್ರಪ್ಪ ಹಳ್ಳಿ, ದೊಡ್ಡಪ್ಪ ಬುಳ್ಳಾ, ಸೀನಯ್ಯ ಇಲ್ಲೂರು, ಜಿ.ವೆಂಕಟೇಶ, ಶರಣಯ್ಯ ಸೊಪ್ಪಿಮಠ, ಗುತ್ತಿಗೆದಾರ ಶ್ರೀನಿವಾಸ ಅಮ್ಮಾಪುರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts