More

    ಕದ್ರಿ ಪಾರ್ಕ್ ರಸ್ತೆ ನಿರ್ಮಾಣಕ್ಕೆ ವೇಗ

    ಭರತ್ ಶೆಟ್ಟಿಗಾರ್ ಮಂಗಳೂರು
    ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ಪ್ರಸ್ತುತ ವೇಗ ಪಡೆದಿದ್ದು, ಭರದಿಂದ ಸಾಗಿದೆ. ಲಾಕ್‌ಡೌನ್ ನಡುವೆಯೂ ಕಾಮಗಾರಿ ಮುಂದುವರಿದಿದೆ.

    ಮಂಗಳೂರಿನಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲೇ ಇದಕ್ಕೊಂದು ವಿಶೇಷತೆಯಿದೆ. ಸ್ಥಳದಲ್ಲಿರುವ ಮರಗಳನ್ನು ಹಾಗೇ ಉಳಿಸಿ, ಪರಿಸರಕ್ಕೆ ಪೂರಕವಾಗಿಯೇ ಈ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಪ್ರದೇಶದ ಹಸಿರು, ನೆರಳಿನ ವಾತಾವರಣ ಮುಂದಿನ ದಿನಗಳಲ್ಲೂ ಹಾಗೇ ಇರಲಿದೆ. 2022ರ ಫೆಬ್ರವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೈಕೋರ್ಟ್ ತಡೆಯಾಜ್ಞೆಯಿಂದ ಮೂರು ತಿಂಗಳು ಕಾಮಗಾರಿ ಸ್ಥಗಿತಗೊಂಡಿರುವುದು ಹೊರತುಪಡಿಸಿದರೆ, ನಿರಂತರ ಕೆಲಸ ನಡೆಯುತ್ತಿವೆ.

    ಒಟ್ಟು 12 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಪ್ರಮುಖ ಕೆಲಸಗಳಾದ ಕಾಂಕ್ರೀಟ್, ಚರಂಡಿ ನಿರ್ಮಾಣ, ಭೂಗತ ಕೇಬಲ್ ಅಳವಡಿಕೆ, ರ‌್ಯಾಂಪ್ ನಿರ್ಮಾಣ ಮೊದಲಾದ ಹೆಚ್ಚು ಶ್ರಮದಾಯಕ ಕೆಲಸಗಳು ಬಹುತೇಕ ಮುಗಿದಿವೆ. ಇನ್ನೇನಿದ್ದರೂ ನಾಜೂಕಾದ ಕೆಲಸಗಳು ಬಾಕಿ ಇದೆ. ಮುಖ್ಯವಾಗಿ ಫೌಂಟೈನ್, ಮ್ಯೂರಲ್, ಪೈಂಟಿಂಗ್, ಟೈಲಿಂಗ್, ಪ್ಲಾಂಟೇಶನ್, ಪರ್ಗೋಲಾ ಮೊದಲಾದವುಗಳು ನಿರ್ಮಾಣವಾಗಬೇಕಿದೆ. ಇವುಗಳಿಗೆ ವೆಚ್ಚ ಕಡಿಮೆಯಾದರೂ, ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ವಾಕಿಂಗ್ ಟ್ರಾೃಕ್, ಸೈಕಲ್ ಟ್ರ್ಯಾಕ್‌ಗಳು ಈ ಕಾಮಗಾರಿಯಲ್ಲಿ ಸೇರಿವೆ. ಈ ಮಳೆಗಾಲದಲ್ಲೂ ಕೆಲಸಗಳು ಮುಂದುವರಿಯಲಿವೆ.

    ಹೇಗಿರುತ್ತೆ ರಸ್ತೆಯ ಚಿತ್ರಣ: ಕದ್ರಿ ಪಾರ್ಕ್ ರಸ್ತೆಯನ್ನು ಪೂರ್ವ ವಲಯ, ಪಶ್ಚಿಮ ವಲಯ ಮತ್ತು ಮಧ್ಯ ವಲಯ ಎಂದು ಮೂರು ಭಾಗಗಳಾಗಿ ವಿಂಗಡಿಸಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಸರ್ಕೀಟ್ ಹೌಸ್‌ನಿಂದ ಆಕಾಶವಾಣಿವರೆಗೆ ಪೂರ್ವ ವಲಯ, ಪದವು ಹೈಸ್ಕೂಲ್ ಕಡೆಯಿಂದ ಗೋರಕ್ಷನಾಥ ಸಭಾಂಗಣವರೆಗೆ ಪಶ್ಚಿಮ ವಲಯ ಎಂದು ಹೆಸರಿಸಲಾಗಿದೆ. ಎರಡೂ ಕಡೆಯಿಂದ ಬರುವ ಪ್ರವಾಸಿ ವಾಹನಗಳು ತಮ್ಮ ವಲಯದ ಅಂತ್ಯದಲ್ಲಿ ಯೂ-ಟರ್ನ್ ಪಡೆದುಕೊಳ್ಳಬೇಕು. ಮಧ್ಯ ವಲಯವು ಕದ್ರಿ ಪಾರ್ಕ್ ಮತ್ತು ಕಾರಂಜಿ ಉದ್ಯಾನ ಎರಡನ್ನೂ ಒಂದಾಗಿ ಮಾಡಲಿದೆ. ಇದು ಯೋಜನೆಯ ಪ್ರಮುಖ ಭಾಗವೂ ಆಗಿದೆ. ಪ್ರಸ್ತುತ ಉದ್ಯಾನದ ಬದಿಯಲ್ಲಿರುವ ಫುಡ್‌ಸ್ಟಾಲ್‌ಗಳಿಗೆ ಎರಡೂ ವಲಯದಲ್ಲಿ ಪ್ರತ್ಯೇಕ ಅಂಗಡಿ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಮಧ್ಯ ವಲಯದಲ್ಲಿ ಆಹಾರ ವಸ್ತುಗಳಿಗೆ ಅವಕಾಶವಿಲ್ಲ, ಬದಲಾಗಿ ಕರಕುಶಲ ವಸ್ತುಗಳು, ಜಿಲ್ಲೆಯ ವಿವಿಧ ಕಲೆಗಳಿಗೆ ಸಂಬಂಧಿಸಿದ ಮಾರಾಟ ಮಳಿಗೆಗಳು ಮಾತ್ರ ಇರಲಿವೆ.

    ಪೂರ್ವ ಮತ್ತು ಪಶ್ಚಿಮ ವಲಯದ ಕೆಲಸಗಳು ಭಾಗಶಃ ಮುಗಿದಿವೆ. ಮಧ್ಯ ವಲಯದ ಕೆಲಸಗಳು ಇನ್ನಷ್ಟೇ ಪ್ರಾರಂಭಿಸಬೇಕಿದೆ. ಮುಂದಿನ ದಿನಗಳಲ್ಲಿ ಕೆಲಸ ಇನ್ನಷ್ಟು ವೇಗವಾಗಿ ಸಾಗಲಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇವೆ.
    ಅರುಣ್‌ಪ್ರಭಾ ಕೆ.ಎಸ್.
    ಜನರಲ್ ಮ್ಯಾನೇಜರ್, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts