More

    ಟ್ರಕ್​-ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ದುರ್ಮರಣ: ಪ್ರಧಾನಿ ಮೋದಿ ಸಂತಾಪ

    ಜೈಪುರ: ಟ್ರಕ್​ ಮತ್ತು ಜೀಪ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚಿತ್ತೋರ್​ಗಢ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

    ಸುಧಾಲ್ಖೇರಾ ಬಳಿಯ ಉದಯ್​ಪುರ್​-ನಿಂಬಾಹೇರಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಚಿತ್ತೋರ್​ಗಢ ಜಿಲ್ಲಾಧಿಕಾರಿ ಕಿಶೋರ್​ ಕುಮಾರ್​ ಶರ್ಮಾ, ಅಪಘಾತದಲ್ಲಿ ಏಳು ಮಂದಿ ಸಾವಿಗೀಡಾಗಿ, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯದಿಂದ ತೀವ್ರ ರಕ್ತಸ್ರಾವವಾಗಿ ಕೆಲ ಸಮಯದ ಬಳಿಕ ಅಸುನೀಗಿದರು. ಗಂಭೀರವಾಗಿ ಗಾಯಗೊಂಡು 9 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಚಿತ್ತೋರ್​ಗಢ ಪೊಲೀಸ್​ ವರಿಷ್ಠಾಧಿಕಾರಿ ದೀಪಕ್​ ಭಾರ್ಗವ್​ ಹೇಳಿದ್ದಾರೆ.

    ಇದನ್ನೂ ಓದಿ: ನಿಲ್ಲದ ಮುಷ್ಕರ ಸದ್ಯಕ್ಕಿಲ್ಲ ಪರಿಹಾರ: ಇಂದೂ ರಸ್ತೆಗಿಳಿಯಲ್ಲ ಸರ್ಕಾರಿ ಬಸ್​ಗಳು?

    ಅಪಘಾತದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿತ್ತೋರ್​ಗಢದ ನಿಕುಂಭ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕೆಲವರು ಪ್ರಾಣ ಕಳೆದುಕೊಂಡಿರುವ ಬಗ್ಗೆ ನನಗೆ ನೋವಿದೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ದುಃಖಿತ ಕುಟುಂಬದ ಜತೆ ಇವೆ. ಗಾಯಗೊಂಡವರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆಂದು ಪ್ರಧಾನಿ ತಿಳಿಸಿದ್ದಾರೆ.

    ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಸಹ ಸಂತಾಪ ಸೂಚಿಸಿದ್ದು, ದುಃಖಿತ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಬಯಸುತ್ತೇನೆಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

    8 ತಿಂಗಳಲ್ಲಿ 30 ಕೋಟಿ ಭಾರತೀಯರಿಗೆ ಲಸಿಕೆ

    ರೋಹಿತ್ ಶರ್ಮ ಆಸ್ಟ್ರೇಲಿಯಾಕ್ಕೆ ಹೋದರೂ ಟೆಸ್ಟ್ ಆಡುವುದು ಖಚಿತವಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts