More

    ರಸ್ತೆ ಮೇಲೆ ಕಸ ವಿಂಗಡಣೆಗೆ ವಿರೋಧ

    ಬೆಳಗಾವಿ: ಜಾಧವ ನಗರದಲ್ಲಿ ರಸ್ತೆಯ ಮೇಲೆ ಕಸ ಸುರಿದು, ಅದನ್ನು ವಿಂಗಡಿಸಿ ಬೇರೆ ವಾಹನಗಳಲ್ಲಿ ಪೌರ ಕಾರ್ಮಿಕರು ಸಾಗಿಸುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿವಿಧ ಬಡಾವಣೆಗಳ ಮನೆಗಳು ಮತ್ತು ಆಸ್ಪತ್ರೆಗಳಿಂದ ಕಸ ಸಂಗ್ರಹಿಸಿಕೊಂಡು ಬಂದು ರಸ್ತೆಯ ಮೇಲೆ ಸುರಿಯುತ್ತಾರೆ. ನಂತರ ಅದರಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಪ್ರತ್ಯೇಕಿಸಿ, ಬೇರೆ ವಾಹನದಲ್ಲಿ ಸಾಗಿಸುತ್ತಾರೆ. ಆದರೆ ಕಸ ಪ್ರತ್ಯೇಕಿಸಿದ ಜಾಗದಲ್ಲಿ ಔಷಧ ಸಿಂಪಡಿಸುವುದಿಲ್ಲ. ಅಲ್ಲದೆ, ಇಲ್ಲಿ ಬಿದ್ದಿರುವ ತ್ಯಾಜ್ಯ ಪದಾರ್ಥಗಳನ್ನು ಬಿಡಾಡಿ ದನಗಳು ರಸ್ತೆ ತುಂಬ ಹರಡಿ, ಅನಾರೋಗ್ಯಕರ ವಾತಾವರಣ ಸೃಷ್ಟಿಸುತ್ತಿವೆ ಎಂದು ಜನರು ದೂರಿದ್ದಾರೆ.

    ಪಾಲಿಕೆ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕು. ತಪ್ಪೆಸಗಿದವರ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೆ, ನಗರದ ಹೊರ ವಲಯದಲ್ಲಿ ಕಸ ವಿಂಗಡಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಪ್ರಹ್ಲಾದ್ ಅಂಬೇಕರ್ ಆಗ್ರಹಿಸಿದ್ದಾರೆ.

    ಜಾಧವ ನಗರದಲ್ಲಿ ಅವೈಜ್ಞಾನಿಕವಾಗಿ ಕಸ ವಿಂಗಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇನೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
    | ಕೆ.ಎಚ್. ಜಗದೀಶ, ಆಯುಕ್ತ, ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts