More

    ದಪ್ಪ ಇದ್ದರೆ ಮಕ್ಕಳಾಗದ ಸಮಸ್ಯೆ ಉಂಟಾದೀತು ಎಚ್ಚರ!

    ಬೆಂಗಳೂರು: ಇತ್ತೀಚೆಗೆ ಮಕ್ಕಳಾಗದಿರುವ ಸಮಸ್ಯೆ ಕೂಡ ಸಾಕಷ್ಟು ಪ್ರಮಾಣದಲ್ಲಿ ದಂಪತಿಗಳನ್ನು ಕಾಡುತ್ತಿದೆ. ಮಕ್ಕಳಾಗದಿರಲು ಗಂಡ ಅಥವಾ ಹೆಂಡತಿ ಇಬ್ಬರ ಪೈಕಿ ಯಾರಲ್ಲಾದರೂ ಸಮಸ್ಯೆ ಇರಬಹುದು. ಆದರೆ ಇದೀಗ ದಪ್ಪಗಿರುವುದು ಕೂಡ ಮಕ್ಕಳಾಗದಿರುವ ಸಮಸ್ಯೆಗೆ ಕಾರಣವಾಗಬಹುದು ಎನ್ನಲಾಗಿದೆ.

    ಹೌದು.. ದಪ್ಪಗಿರುವುದರಿಂದ ಮಕ್ಕಳಾಗದಿರುವ ಸಮಸ್ಯೆ ಕಾಡುವ ಸಾಧ್ಯತೆ ಅಧಿಕ. ಇದಕ್ಕೆ ಸ್ತ್ರೀ-ಪುರುಷ ಎಂಬ ಭೇದವಿಲ್ಲ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಅದರಲ್ಲೂ ದಪ್ಪಗಿರುವ ಪುರುಷರ ಪೈಕಿ ಅರ್ಥಾತ್ ಸ್ಥೂಲಕಾಯದ ಪುರುಷರಲ್ಲಿ ಶೇ. 51 ಮಂದಿಯಲ್ಲಿ ವೀರ್ಯಾಣುಗಳ ಸಂಖ್ಯೆ ತಗ್ಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ ಎಂದು ಈ ಅಧ್ಯಯನ ಹೇಳಿದೆ.

    ಇದನ್ನೂ ಓದಿ: ಗ್ಯಾಂಗ್​ ರೇಪ್​ ಮಾಡಿದರೆಂದು ದೂರು ನೀಡಲು ಬಂದ ಮಹಿಳೆಯನ್ನೇ ರೇಪ್​ ಮಾಡಿದ ಎಸ್​ಪಿ! 

    ಇನ್ನು ಮಹಿಳೆಯರಲ್ಲಿ ಮಕ್ಕಳಾಗದಿರುವಿಕೆಗೆ ಅನಿಯಮಿತ ಋತುಚಕ್ರ, ಪಿಸಿಒಎಸ್​ ಅಥವಾ ಹಾರ್ಮೋನ್ ಸಮಸ್ಯೆ ಕಾರಣವಾಗಿರುತ್ತದೆ. ಅದರಲ್ಲೂ ಅವರು ಸ್ಥೂಲಕಾಯರಾಗಿದ್ದರೆ ಈ ಸಮಸ್ಯೆಗಳು ಇನ್ನಷ್ಟು ತೀವ್ರಗೊಂಡು ಮಕ್ಕಳಾಗದಿರುವ ಸಾಧ್ಯತೆ ಅಧಿಕವಾಗಿರುತ್ತದೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ನವದೆಹಲಿಯ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಡಾ. ಸುಖವಿಂದರ್ ಎಸ್. ಸಗ್ಗು ಹೇಳಿದ್ದಾರೆ.

    ಸ್ಥೂಲಕಾಯ ಅಥವಾ ಒಬೆಸಿಟಿ ಎಂದಾಕ್ಷಣ ಅದು ಬರೀ ದೇಹದ ತೂಕವಷ್ಟೇ ಅಲ್ಲ. ಅದನ್ನು ಬಿಎಂಐ ಎಂದರೆ ಬಾಡಿ ಮಾಸ್ ಇಂಡೆಕ್ಸ್​​ನಿಂದಲೂ ಅಳೆಯಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಪ್ರಕಾರ ಬಿಎಂಐ 30ಕ್ಕಿಂತ ಹೆಚ್ಚಿದ್ದರೆ ಅದನ್ನು ಕ್ಲಾಸ್​ 1 ಒಬೆಸಿಟಿ ಎನ್ನಲಾಗುತ್ತದೆ. ಬಿಎಂಐ 35ಕ್ಕಿಂತ ಹೆಚ್ಚಿದ್ದರೆ ಅದನ್ನು ಕ್ಲಾಸ್ 2 ಅಂದರೆ ಸೀರಿಯಸ್ ಒಬೆಸಿಟಿ ಮತ್ತು ಬಿಎಂಐ 40ಕ್ಕಿಂತ ಹೆಚ್ಚಿದ್ದರೆ ಅದನ್ನು ಅತಿ ಗಂಭೀರ ಸ್ಥೂಲಕಾಯ ಎಂದು ಪರಿಗಣಿಸಲಾಗುತ್ತದೆ ಎನ್ನುತ್ತಾರೆ ಡಾ.ಸುಖವಿಂದರ್ ಸಗ್ಗು. (ಏಜೆನ್ಸೀಸ್​)

    3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

    ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?

    ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts