
Rishab Shetty : ತೆಲುಗು ನಿರ್ಮಾಪಕ ನಾಗ ವಂಶಿ ಅವರು ತಮ್ಮ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸರಣಿ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಯಶಸ್ಸು ಸಹ ಪಡೆಯುತ್ತಿದ್ದಾರೆ. ಇದೀಗ ಮತ್ತೊಂದು ಮೆಗಾ ಸಿನಿಮಾವನ್ನು ಸಿನಿ ತಂಡ ಘೋಷಿಸಿದೆ. ಸ್ಯಾಂಡಲ್ವುಡ್ ಸ್ಟಾರ್ ಹೀರೋ ಹಾಗೂ ಕಾಂತಾರ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ರಿಷಭ್ ಶೆಟ್ಟಿ ಅವರೊಂದಿಗೆ ನಾಗ ವಂಶಿ ಅವರು ಹೊಸ ಚಿತ್ರವನ್ನು ಘೋಷಿಸಿದ್ದಾರೆ.
ಶ್ರೀಕರ ಸ್ಟುಡಿಯೋಸ್, ಸಿತಾರಾ ಎಂಟರ್‌ಟೈನ್‌ಮೆಂಟ್ಸ್, ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಾಗ ವಂಶಿ, ಸಾಯಿ ಸೌಜನ್ಯ ನಿರ್ಮಾಣ ಮಾಡುತ್ತಿದ್ದು, ಅಶ್ವಿನ್ ಗಂಗರಾಜು ಅವರು ನಿರ್ದೇಶನ ಮಾಡಲಿದ್ದಾರೆ. ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಇದಕ್ಕೆ ಸಂಬಂಧಿಸಿದ ಪೋಸ್ಟರ್ ಅನ್ನು ಇಂದು ಚಿತ್ರತಂಡ ಬಿಡುಗಡೆ ಮಾಡಿದೆ. ಇದೊಂದು ವೀರ ಯೋಧನ ಕಥೆ ಎಂಬುದು ಪೋಸ್ಟರ್ ನೋಡಿದರೆ ಗೊತ್ತಾಗಿದೆ. ಭೂಮಿ ಸುಟ್ಟುಹೋಯಿತು ನಾಯಕನೊಬ್ಬ ಉದಯಿಸಿದನು ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಮಧುಮೇಹಿಗಳ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಂತಹ 5 ಅದ್ಭುತ ತರಕಾರಿಗಳು ಇಲ್ಲಿವೆ… Diabetes
ಪೋಸ್ಟರ್ನಿಂದಲೇ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಕಾಂತಾರ ನಂತರ ರಿಷಭ್ ಶೆಟ್ಟಿ ಈಗಾಗಲೇ ದೊಡ್ಡ ಸಿನಿಮಾಗಳ ಸರಣಿಯಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಜೈ ಹನುಮಾನ್ ಸಿನಿಮಾವನ್ನೂ ಮಾಡುತ್ತಿದ್ದಾರೆ. ಈಗ, ಸಿತಾರಾ ಬ್ಯಾನರ್ ಅಡಿಯಲ್ಲಿ ಈ ದೊಡ್ಡ ಸಿನಿಮಾಗೆ ಓಕೆ ಎಂದಿದ್ದಾರೆ. ಈ ಸಿನಿಮಾ ಒಂದು ಕಾಲ್ಪನಿಕ ಐತಿಹಾಸಿಕ ಆಕ್ಷನ್ ಡ್ರಾಮಾ ಆಗಲಿದೆ. 18ನೇ ಶತಮಾನದಲ್ಲಿ ಭಾರತದ ಪ್ರಕ್ಷುಬ್ಧ ಬಂಗಾಳ ಪ್ರಾಂತ್ಯದಲ್ಲಿ ಬಂಡಾಯಗಾರನ ಉದಯವನ್ನು ಆಧರಿಸಿದ ಕಥೆ ಇದಾಗಿದೆ ಎಂದು ಹೇಳಲಾಗುತ್ತದೆ. ಈ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ದ್ವಿಭಾಷಾ ಚಿತ್ರವಾಗಿ ತಯಾರಾಗುತ್ತಿದ್ದರೂ, ತೆಲುಗು ಮತ್ತು ಕನ್ನಡದ ಜೊತೆಗೆ ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಬಗ್ಗೆ ರಿಷಭ್ ಶೆಟ್ಟಿ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನ ಮುಂದಿನ ಚಿತ್ರ, ಎಂದಿನಂತೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದಿದ್ದಾರೆ. ಅಲ್ಲದೆ, ಎಲ್ಲ ಬಂಡುಕೋರರು ಯುದ್ಧದಲ್ಲಿ ನಕಲಿಯಾಗಿಲ್ಲ. ಕೆಲವನ್ನು ವಿಧಿ ಆಯ್ಕೆ ಮಾಡುತ್ತದೆ ಮತ್ತು ಇದು ಬಂಡಾಯಗಾರನ ಕಥೆ ಎಂದು ರಿಷಭ್ ಬರೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಬಗ್ಗೆ ಮತ್ತಷ್ಟು ಅಪ್ಡೇಟ್ಗಳು ಸಿಗಲಿದೆ. (ಏಜೆನ್ಸೀಸ್)
ನನ್ನ ಮುಂದಿನ ಚಿತ್ರ, ನಿಮ್ಮ ಆಶೀರ್ವಾದ ಎಂದಿನಂತೆ ಸದಾ ಇರಲಿ 😊
Not all Rebels are forged in Battle. ⚔️
Some are chosen by Destiny
And this is that story of a Rebel..💥💥Directed by @AshwinGangaraju
Produced by @SitharaEnts @vamsi84 & #SaiSoujanya@Fortune4Cinemas #SrikaraStudios pic.twitter.com/rhZUcTcrxU
— Rishab Shetty (@shetty_rishab) July 30, 2025
ಒತ್ತಡ, ಕೋಪವನ್ನು ತಗ್ಗಿಸಿ ಶಾಂತವಾಗಿರುವುದು ಹೇಗೆ? ಇಲ್ಲಿದೆ ಐದು ಮಾರ್ಗಗಳು… Stress and Anger