More

    “ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ” : ಸುಪ್ರೀಂ ಕೋರ್ಟ್

    ನವದೆಹಲಿ: ಪ್ರತಿಭಟನೆಯ ಹಕ್ಕಿದೆ ಅಂದ ಮಾತ್ರಕ್ಕೆ “ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಟಿಜನ್​ಶಿಪ್​ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಾನೂನುಬಾಹಿರ ಎಂದು ಹೇಳಿದ್ದ ತನ್ನ ತೀರ್ಪನ್ನು ಬದಲಿಸಲು ನಿರಾಕರಿಸಿರುವ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

    ದೆಹಲಿಯ ಶಾಹೀನ್ ಬಾಗ್​ನಲ್ಲಿ 2019 ರಲ್ಲಿ ಮೂರು ತಿಂಗಳ ಕಾಲ ನಡೆದ ಪ್ರತಿಭಟನೆಯನ್ನು ಅಕ್ಟೋಬರ್ 2020 ರಲ್ಲಿ ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪುನರ್​ಪರಿಶೀಲಿಸಲು ಕೋರಿ ಹನ್ನೆರಡು ಚಳುವಳಿಗಾರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ವಜಾ ಮಾಡಿದೆ.

    ಇದನ್ನೂ ಓದಿ: ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಸಾಮಾಜಿಕ ಕಾರ್ಯಕರ್ತನಿಗೆ ಜಾಮೀನು ನೀಡದ ಸುಪ್ರೀಂಕೋರ್ಟ್​

    “ಪ್ರತಿಭಟಿಸುವ ಮತ್ತು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಕೆಲವೊಂದು ಕರ್ತವ್ಯಗಳೊಂದಿಗೆ ಬರುತ್ತದೆ. ಪ್ರತಿಭಟನೆಗಳನ್ನು ಅದಕ್ಕಾಗಿ ನಿಗದಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಮಾಡತಕ್ಕದ್ದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “ಪ್ರತಿಭಟನೆಯ ಹಕ್ಕನ್ನು ಯಾವುದೇ ಸಮಯದಲ್ಲಿ ಎಲ್ಲಾ ಕಡೆಗಳಲ್ಲೂ ಚಲಾಯಿಸಲಾಗದು. ದಿಢೀರನೆ ಉಂಟಾಗುವ ಪ್ರತಿಭಟನೆಗಳು ಸರಿ…ಆದರೆ ದೀರ್ಘಕಾಲ ನಡೆಸುವ ಪ್ರತಿಭಟನೆಯಲ್ಲಿ ನಿರಂತರವಾಗಿ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡು ಬೇರೆಯವರ ಹಕ್ಕುಗಳಿಗೆ ತೊಂದರೆ ಕೊಡುವುದು ತರವಲ್ಲ” ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

    ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಕೋಮು ಹಿಂಸೆಯಿಂದ ಪಾರಾಗಲು 2015 ಕ್ಕೆ ಮುಂಚೆ ಭಾರತಕ್ಕೆ ಬಂದು ನೆಲೆಸಿದ ಮುಸ್ಲಿಮೇತರರಿಗೆ ಭಾರತೀಯ ನಾಗರೀಕತೆ ನೀಡುವ ಸಿಎಎ ಕಾನೂನಿನ ವಿರುದ್ಧ 2019 ರಲ್ಲಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ದೆಹಲಿಯ ಶಾಹೀನ್​ ಬಾಗ್​ ಈ ಆ್ಯಂಟಿ-ಸಿಎಎ ಪ್ರತಿಭಟನೆಗಳ ಕೇಂದ್ರವಾಗಿ ಹೊರಹೊಮ್ಮಿತ್ತು. ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಾಗಿ ಪಾಲ್ಗೊಂಡಿದ್ದು, ಪ್ರತಿಭಟನಾಕಾರರು ಮೂರು ತಿಂಗಳವರೆಗೆ ಧರಣಿ ಕೂತಿದ್ದರು.(ಏಜೆನ್ಸೀಸ್)

    ಸುಳ್ಳು ಸುದ್ದಿ, ದ್ವೇಷ ಹರಡುವ ಟ್ವೀಟ್​ಗಳು : ಟ್ವಿಟರ್ ಮತ್ತು ಸರ್ಕಾರಕ್ಕೆ ಸುಪ್ರೀಂ ನೋಟೀಸು

    ಯಾರ್ರಿ ಕುಟುಂಬ ರಾಜಕಾರಣ ಮಾಡ್ತಿರೋರು? ಪ್ರಧಾನಿಯಾಗಿ 30 ವರ್ಷವಾಗಿದೆ… ರಾಹುಲ್‌ ಕಿಡಿಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts