More

    ನೀರಲ್ಲಿ ಮುಳುಗಿದ ಭತ್ತದ ಪೈರು

    ಗೋಕರ್ಣ: ಈ ಭಾಗದಲ್ಲಿ ಭಾನುವಾರದಿಂದ ಚದುರಿದಂತೆ ಅಕಾಲಿಕ ಮಳೆ ಸುರಿಯುತ್ತಿದೆ. ಈ ನಡುವೆ ಮಂಗಳವಾರ ಬೆಳಗ್ಗೆ ಸಣ್ಣದಾಗಿ ಆರಂಭವಾಗಿದ್ದ ಮಳೆ ಮಧ್ಯಾಹ್ನ 3ರಿಂದ 6ರವರೆಗೆ ಗುಡುಗು ಸಹಿತವಾಗಿ ಭಾರೀ ಪ್ರಮಾಣದಲ್ಲಿ ಸುರಿದಿದೆ.

    ಇದರಿಂದ ಕೊಯ್ಲಿಗೆ ಬಂದಿದ್ದ , ಕೊಯ್ಲಾಗಿದ್ದ ಭತ್ತದ ಗದ್ದೆಗಳಿಗೆ ತೀವ್ರ ಹಾನಿ ಉಂಟಾಗಿದೆ. ತಾರಮಕ್ಕಿ, ಸಮುದ್ರ ಸನಿಹದ ಬೇಲೆಗದ್ದೆ, ದಂಡೆಭಾಗ, ಬಾವಿಕೊಡ್ಲ ಮುಂತಾದೆಡೆಗಳಲ್ಲಿನ ಗದ್ದೆಗಳ ಬೆಳೆ ತೊಂದರೆಗೀಡಾಗುವಂತಾಗಿದೆ. ಕೆಲ ರೈತರು ಮಾತ್ರ ಗದ್ದೆಗಳಲ್ಲಿ ಭತ್ತ ಕಟಾವು ಮಾಡಿ ಸುರಕ್ಷಿತ ತಾಣಗಳಿಗೆ ಒಯ್ದಿದ್ದಾರೆ. ಆದರೆ, ಸಾವಿರಾರು ಎಕರೆಗೂ ಹೆಚ್ಚಿನ ಭತ್ತದ ಪೈರು ತುಂಬಿ ನಿಂತ ಗದ್ದೆಗಳಲ್ಲಿ ಇನ್ನೂ ಕಟಾವು ಬಾಕಿ ಇದೆ. ಕೆಲವರು ಕಳೆದ ಎರಡು ದಿನಗಳ ಹಿಂದೆ ಕಟಾವು ಮಾಡಿ ಪೈರನ್ನು ಮನೆಗೆ ಸಾಗಿಸದೆ ಗದ್ದೆಗಳಲ್ಲಿಯೇ ಒಣಗಲು ಬಿಟ್ಟಿದ್ದರು. ಈ ಹಂತದಲ್ಲಿ ದಿಢೀರ್ ಕಾಣಿಸಿಕೊಂಡ ತೀವ್ರವಾದ ಮಳೆ ಭತ್ತ ಹಾಳಾಗಲು ಕಾರಣವಾಗಿದೆ. ಪೈರು ನೀರಲ್ಲಿ ಮುಳುಗಿರುವುದರಿಂದ ಭತ್ತದ ಬೀಜ ನಾಶವಾಗುವ ಸಂಗಡ ಹುಲ್ಲು ಕಹಿ ಹಾಗೂ ಕಪ್ಪಾಗಿ ಪಶುಗಳ ಆಹಾರಕ್ಕೂ ದೊರಕದ ದುಸ್ಥಿತಿ ಎದುರಾಗಿದೆ.

    ಮಳೆಯಿಂದಾಗಿ ಮಿರ್ಜಾನ್ ಬಳಿ ಗೋಕರ್ಣಕ್ಕೆ ವಿದ್ಯುತ್ ಸಾಗಿಸುವ ಮೇನ್ ಲೈನ್ ತುಂಡಾಗಿರುವುದರಿಂದ ಗೋಕರ್ಣ ಮತ್ತು ಸುತ್ತಲಿನ ಎಲ್ಲ ಆರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ನಾಲ್ಕು ತಾಸಿಗೂ ಹೆಚ್ಚು ಹೊತ್ತು ಹೆಸ್ಕಾಂ ಸಿಬ್ಬಂದಿ ಮಳೆಯಲ್ಲಿಯೇ ಕಾರ್ಯನಿರ್ವಹಿಸಿ ಗೋಕರ್ಣದ ಎಲ್ಲ ಫೀಡರ್​ಗಳು ಕಾರ್ಯ ನಿರ್ವಹಿಸುವಂತೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts