More

    ಆರೋಗ್ಯ ವಿವಿ ಕಟ್ಟಡಕ್ಕೆ ಜೂನ್​ನಲ್ಲಿ ಅಡಿಗಲ್ಲು, 50 ಎಕರೆ ಪ್ರದೇಶದಲ್ಲಿ ನಿರ್ಮಾಣ | ಡಿಸಿಎಂ ಅಶ್ವತ್ಥನಾರಾಯಣ ಘೋಷಣೆ

    ಬೆಂಗಳೂರು: ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್​ಜಿಯುಎಚ್​ಎಸ್) ಕಟ್ಟಡ ನಿರ್ಮಾಣ ಕ್ಕೆ ಜೂನ್ ಮೊದಲ ವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ವಿವಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳ್ಳಿಹಬ್ಬದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ರಾಮನಗರದಲ್ಲಿ ಹಾಲಿ ಇರುವ ಆಸ್ಪತ್ರೆಯನ್ನು ಉನ್ನತೀಕರಿಸಲಾಗುವುದು. ಆಡಳಿತ ಕಚೇರಿ ನಿರ್ವಿುಸಿದ ಮೇಲೆ ವಿವಿ ಸ್ಥಳಾಂತರ ಮಾಡಲಾಗುವುದು ಎಂದರು.

    214 ಎಕರೆ: ರಾಮನಗರದ ಆರ್ಚಕರ ಹಳ್ಳಿಯಲ್ಲಿ 214 ಎಕರೆ ಭೂಮಿಯನ್ನು ವಿವಿಯು ವಶಪಡಿಸಿಕೊಂಡಿದೆ. ಆಸ್ಪತ್ರೆ ಹಾಗೂ ಆಡಳಿತ ಭವನ ನಿರ್ವಣಕ್ಕೆ ಅಂದಾಜು 50 ಎಕರೆ ಭೂಮಿ ಸಾಕು. ಇದು ಲಭ್ಯವಿರುವುದರಿಂದ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು. ಕುಲಪತಿ ಡಾ.ಸಚ್ಚಿದಾನಂದ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ. ಕೆ.ಬಿ. ಲಿಂಗೇಗೌಡ ಇದ್ದರು.

    ವಿಶ್ವದರ್ಜೆಯ ಆರೋಗ್ಯನಗರ: ಭೀಮನಕುಪ್ಪೆಯಲ್ಲಿ ವಿವಿಯು 50 ಎಕರೆ ಪ್ರದೇಶ ಹೊಂದಿದೆ. ಇಲ್ಲಿ ವಿಶ್ವ ದರ್ಜೆಯ ಆರೋಗ್ಯ ನಗರವನ್ನು ನಿರ್ವಿುಸಲಾಗುವುದು. ಈಗಾಗಲೇ ಕೆಲವು ಕಂಪನಿಗಳು ಇಲ್ಲಿ ತಮ್ಮ ಕಚೇರಿಗಳನ್ನು ಆರಂಭಿಸಲು ಮುಂದೆ ಬಂದಿವೆ. ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಅಭಿವೃದ್ಧಿಯನ್ನು ಅಳವಡಿಸಿಕೊಂಡು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ‘ವಿಷನ್ ಗ್ರೂಪ್’ ರಚಿಸಲಾಗಿದೆ. ಇದರ ಸಲಹೆ ಪಡೆದು ಉತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

    ಆರ್​ಜಿಯು ಎಚ್​ಎಸ್ ಮಾದರಿ ವಿವಿಯಾಗಿ ರೂಪುಗೊಳ್ಳಬೇಕು. ಸಂಯೋಜನೆ ನೀಡುವುದು ಮತ್ತು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುವುದಷ್ಟೇ ಕೆಲಸವಾಗಬಾರದು. ಹೊಸ ಕೋರ್ಸ್​ಗಳನ್ನು ಪರಿಚಯಿಸಬೇಕು.
    | ಡಾ. ಅಶ್ವತ್ಥನಾರಾಯಣ ಉಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts