More

    11ಇ, ಹದ್ದುಬಸ್ತು ಅರ್ಜಿ ಶುಲ್ಕ ಪರಿಷ್ಕರಣೆ; ಕಂದಾಯ ಇಲಾಖೆಯಿಂದ ಹೊಸ ಆದೇಶ

    ಬೆಂಗಳೂರು: ಮೋಜಿಣಿ ಸೇವೆಯಲ್ಲಿ ಜಮೀನು ಹದ್ದುಬಸ್ತು ಮತ್ತು 11ಇ ನಕ್ಷೆಯ ಅರ್ಜಿ ಶುಲ್ಕವನ್ನು ಪರಿಷ್ಕರಣೆ ಮಾಡಿ ಕಂದಾಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

    ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 131(ಬಿ) ಅನ್ವಯ ಮೋಜಿಣಿಯಲ್ಲಿ ಹದ್ದುಬಸ್ತು ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೂ 500 ರೂ. ಮತ್ತು 2 ಎಕರೆಗೆ ಹೆಚ್ಚುವರಿ ಇದ್ದರೆ ಪ್ರತಿ ಎಕರೆಗೆ 300 ರೂ. ಶುಲ್ಕ ನಿಗದಿ ಮಾಡಲಾಗಿದೆ. ನಗರ ಪ್ರದೇಶದಲ್ಲಿ ಎಕರೆ ವರೆಗೆ 2 ಸಾವಿರ ರೂ. ಮತ್ತು 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ 400 ರೂ., ನೋಟಿಸ್ ಶುಲ್ಕ 25 ರೂ. ನಿಗದಿ ಮಾಡಿ ಸರ್ಕಾರ ಆದೇಶಿಸಿದೆ.

    ಇದನ್ನೂ ಓದಿ: ಕ್ರಿಪ್ಟೊಕರೆನ್ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಆರ್​​ಬಿಐ ಗವರ್ನರ್​; ಹೂಡಿಕೆದಾರರಿಗೂ ಹುಷಾರು ಎಂಬ ಕಿವಿಮಾತು

    ಅದೇ ರೀತಿ 11ಇ ನಕ್ಷೆ, ಅಲೈನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೂ 1500 ರೂ. ಮತ್ತು 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ 400 ರೂ. ಹಾಗೂ ನಗರ ಪ್ರದೇಶದಲ್ಲಿ 2 ಎಕರೆ ವರೆಗೆ 2500 ರೂ. ಮತ್ತು 2 ಎಕರೆಗಿಂತ ಹೆಚ್ಚು ಇದ್ದರೆ ಪ್ರತಿ ಎಕರೆಗೆ ಹೆಚ್ಚುವರಿ 1 ಸಾವಿರ ರೂ. ನಿಗದಿ ಮಾಡಲಾಗಿದೆ.

    ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts