More

    ಕೃಷಿ ಹಾಗೂ ವಲಸೆ ಕಾರ್ಮಿಕರಿಗೆ ವಸತಿ, ಆಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವರ ಸೂಚನೆ

    ಬೆಂಗಳೂರು: ಕೃಷಿ ಹಾಗೂ ಕೈಗಾರಿಕೆಗಳ ವಲಸೆ ಕಾರ್ಮಿಕರನ್ನು ಪತ್ತೆ ಮಾಡಿ ಅವರಿಗೆ ವಸತಿ ಹಾಗೂ ಆಹಾರ ಒದಗಿಸುವಂತೆ ಕಂದಾಯ ಸಚಿವ ಆರ್​. ಅಶೋಕ್​ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಮಿಕರ ಹೆಸರು, ವಿಳಾಸ ಪತ್ತೆ ಮಾಡಿ ಅವರನ್ನು ನೋಂದಣಿ ಮಾಡಿಕೊಂಡು ಹತ್ತಿರದ ವಸತಿ ಶಾಲೆ, ಸಮುದಾಯ ಭವನ, ಮದುವೆ ಛತ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲಿ ಅವರಿಗೆ ಶೌಚಾಲಯ, ವಿದ್ಯುತ್​, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಬೇಕು. ಪಡಿತರ ವ್ಯವಸ್ಥೆ ಮೂಲಕ ಅವರಿಗೆ ಆಹಾರ ಧಾನ್ಯ ವಿತರಿಸಬೇಕು. ಇದಕ್ಕಾಗಿ ಎಸ್​ಡಿಆರ್​ಎಫ್​ ಅನುದಾನವನ್ನು ಜಿಲ್ಲಾಧಿಕಾರಗಳು ಬಳಸಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

    ಮಾರುಕಟ್ಟೆ ಸ್ಥಳಾಂತರ: ಕರೊನಾ ವೈರಸ್​ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಹೀಗಾಗಿ ನಗರ ಹಾಗೂ ಪಟ್ಟಣಗಳಲ್ಲಿ ಇರುವ ಮಾರುಕಟ್ಟೆಗಳನ್ನು ವಿಶಾಲವಾದ ಜಾಗಕ್ಕೆ ವರ್ಗಾಯಿಸಿ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

    ದೆಹಲಿಯ ನಿಜಾಮುದ್ದೀನ್​ ಜಮಾತ್​ ಪ್ರಾರ್ಥನಾ ಮಂದಿರದಲ್ಲಿ ಭಾಗವಹಿಸಿದ್ದವರ ಸಂಖ್ಯೆ ಗೊತ್ತಾದರೆ ಬೆಚ್ಚಿ ಬೀಳುತ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts