More

    ಹೊಲದಲ್ಲಿ ಬಿದ್ದ ವಿದ್ಯುತ್ ಕಂಬ

    ರೇವತಗಾಂವ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷೃದಿಂದ ಸಮೀಪದ ಉಮರಜ ಗ್ರಾಮದ ರೈತನ ಹೊಲದಲ್ಲಿ ಗಾಳಿಗೆ ಉರುಳಿ ತಂತಿ ಸಮೇತ ವಿದ್ಯುತ್ ಕಂಬಗಳು ಬಿದ್ದಿವೆ.
    ಉಮರಜ ಗ್ರಾಮದ ರೈತ ಕೃಷ್ಣಪ್ಪ ದುಂಡಪ್ಪ ಅಂಬಿಗೇರ ಎಂಬುವವರ ಹೊಲದ ಬಳಿ ನಿವರಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯ ಮೇನ್ ಲೈನ್ ಕಂಬಗಳು ಆಳವಾಗಿ ಹೂಳದ ಕಾರಣ, ಮೂರು ಕಂಬಗಳು ಗಾಳಿಗೆ ಉರುಳಿ ರೈತನ ಹೊಲದಲ್ಲಿ ಬಿದ್ದಿರುವುದರಿಂದ ಕಂಬ ಬಿದ್ದ ಜಾಗದಲ್ಲಿ ಕಬ್ಬು ನಾಶವಾಗಿದೆ. ರೈತ ಕೈಯಲ್ಲಿ ಜೀವ ಹಿಡಿದುಕೊಂಡು ಹೊಲದಲ್ಲಿ ತಿರುಗಾಡುವಂತಾಗಿದೆ. ಕಂಬಗಳು ಬಿದ್ದು ವಾರ ಕಳೆದರೂ ಯಾರೊಬ್ಬ ಕೆಪಿಟಿಸಿಎಲ್ ಅಧಿಕಾರಿ ಬಂದು ಅವುಗಳ ತೆರವಿಗೆ ಮುಂದಾಗದಿರುವುದು ರೈತನ ಆಕ್ರೋಶಕ್ಕೆ ಕಾರಣವಾಗಿದೆ.
    ಇನ್ನೂ ಮೂರು ಕಂಬಗಳು ವಾಲಿಕೊಂಡಿದ್ದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ತಕ್ಷಣ ಹೆಸ್ಕಾಂ ಅಧಿಕಾರಿಗಳು ಕಾರ್ಯಪ್ರವರ್ತಕರಾಗಿ ರೈತನ ಜಮೀನಿನಲ್ಲಿ ಬಿದ್ದಿರುವ ಕಂಬಗಳನ್ನು ಮೇಲೆತ್ತಬೇಕು ಹಾಗೂ ಆಳವಾಗಿ ಅಗೆದು ವಾಲಿರುವ ಕಂಬಗಳನ್ನು ಹೂಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಹೊಲದಲ್ಲಿ ಬಿದ್ದ ವಿದ್ಯುತ್ ಕಂಬ
    ಹೊಲದಲ್ಲಿ ಬಿದ್ದ ವಿದ್ಯುತ್ ಕಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts