More

    ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

    ರೇವತಗಾಂವ: ಭಾರತ ದೇಶ ಸಾಧು-ಸಂತರ, ಪುಣ್ಯ ಪುರುಷರ ನೆಲೆಬೀಡಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
    ಪಟ್ಟಣದಲ್ಲಿ ಶ್ರೀ ಸಿಂಹಗಢ ಮಹಾರಾಜರ 50ನೇ ಪುಣ್ಯಾರಾಧನೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಅಡ್ಡ ಪಲ್ಲಕ್ಕಿ ಮಹೋತ್ಸವದ ಧರ್ಮಸಭೆ ಉದ್ದೇಶಿಸಿ ಅವರು ಮಾತನಾಡಿದರು.
    ನಮ್ಮ ದೇಶದಲ್ಲಿ ಇಂಥಹ ಮಹಾಪುರುಷರು ಜನ್ಮ ತಾಳಿದ್ದರಿಂದಲೇ ಒಂದಿಷ್ಟು ಪುರಾಣ, ಪ್ರವಚನಗಳನ್ನು ಕೇಳಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದರ ಫಲವಾಗಿ ಸಕಾಲಕ್ಕೆ ಮಳೆ ಬೆಳೆ ಆಗುತ್ತಿರುವುದು ಎಂದು ಹೇಳಿದರು.
    ಅಡ್ಡಪಲ್ಲಕ್ಕಿ ಮಹೋತ್ಸವವು ನೂರಾರು ಸುಮಂಗಲಿಯರ ಆರತಿ, ಕುಂಭ, ಕಲಶಗಳೊಂದಿಗೆ ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿಂಹಗಢ ಮಹಾರಾಜರ ಮುಖ್ಯವೇದಿಕೆಗೆ ತಲುಪಿತು. ನಂತರ ಕೀರ್ತನ ಕೇಸರಿ ಬಸವರಾಜ ಪಾಟೀಲರ ಅಧ್ಯಕ್ಷತೆಯಲ್ಲಿ ಧರ್ಮಸಭೆ ನಡೆಯಿತು.
    ಹಾವಿನಾಳ-ಹತ್ತಳ್ಳಿ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯರು, ಮಂದ್ರೂಪದ ರೇಣುಕ ಶಿವಾಚಾರ್ಯರು, ಹಾವಿನಾಳದ ಗುರು ಮಹಾಂತೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಎಲ್.ಎಚ್.ಚವಾಣ್ ಅಧ್ಯಕ್ಷತೆ ವಹಿಸಿದ್ದರು. ರತಿಕಾಂತ ಭೆರಗೊಂಡ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಎಲ್. ಚವಾಣ್ ಅವರು ಸಿಂಹಗಢ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
    ಎಂ.ಆರ್. ಪಾಟೀಲ, ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ, ವಿಠ್ಠಲ ಕಟಕದೊಂಡ, ನಿವರಗಿ ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ಜಗದೀಶ ಕ್ಷತ್ರಿ, ರಾಮ ಅವಟಿ, ಬಸವರಾಜ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ರಾಜು ಝಳಕಿ, ಸತೀಶ ಪಾಟೀಲ, ಸಾಹೇಬಗೌಡ ಬಿರಾದಾರ, ಶಿವಾನಂದ ಭೈರಗೊಂಡ, ಕಾಮೇಶ ಪಾಟೀಲ, ಮಹಾದೇವ ಅಂಕಲಗಿ, ಶಿವಾನಂದ ಆದಿಗೊಂಡೆ, ಅಪ್ಪು ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts