ನೆರೆ ಮನೆಯವರೊಂದಿಗೆ ಮಗನ ಜಗಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಪೊಲೀಸ್​ ಪೇದೆ

sucide
Published on

ಲಖನೌ: ಪ್ರೀತಿಯ ಮಗ ನೆರೆ ಮನೆಯವರೊಂದಿಗೆ ಜಗಳವಾಡಿಕೊಂಡಿದ್ದನ್ನು ಕಂಡು ಮನನೊಂದ ತಂದೆ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜಲಾನ್​ನಲ್ಲಿ ನಡೆದಿದೆ. ಮೃತ ವ್ಯಕ್ತಿಯು ಪೊಲೀಸ್​ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದ.

ಶ್ಯಾಮಚರಣ್ ಚತುರ್ವೇದಿ ಮೃತ ವ್ಯಕ್ತಿ. ಈತ ತನ್ನ ಮನೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಪರವಾನಗಿ ಪಡೆದ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ. ಇತ್ತೀಚೆಗೆ ಶ್ಯಾಮಚರಣ್ ಅವರ ಮಗ ಮತ್ತು ಅವರ ನೆರೆಹೊರೆಯವರಿಗೆ ಜಗಳವಾಗಿತ್ತಂತೆ. ಈ ವಿಚಾರವಾಗಿ ಅವರ ಮಗ ಪೊಲೀಸ್​ ದೂರನ್ನೂ ನೀಡಿದ್ದನಂತೆ. ಆದರೆ ಪೊಲೀಸರು ಅದರ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ. ಅದೇ ಕಾರಣಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ. (ಪಿಟಿಐ)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net