More

    ನಿವೃತ್ತ ಮುಖ್ಯಕಾರ್ಯದರ್ಶಿ ತಂಡಕ್ಕೆ ಬ್ರ್ಯಾಂಡ್ ಬೆಂಗಳೂರು ರೂಪಿಸುವ ಹೊಣೆ

    ಬೆಂಗಳೂರು: ಬೆಂಗಳೂರು ಮಹಾನಗರವನ್ನು ಉತ್ತಮಗೊಳಿಸಿ ಬ್ರ್ಯಾಂಡ್- ಬೆಂಗಳೂರು ಮತ್ತು ಜಾಗತಿಕ ನಗರವನ್ನಾಗಿ ಮಾಡಲು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ತಜ್ಞರ ಸಮಿತಿ ರಚಿಸಿದೆ.
    ಮಹಾನಗರದ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಮತ್ತು ನವೀನ ವಿಧಾನದ ಮೂಲಕ ಪರಿಣಾಮಕಾರಿ ಮೇಲ್ವಿಚಾರಣೆ, ನಿಯಂತ್ರಣದ ಆಧಾರದ ಮೇಲೆ ಸುಸ್ಥಿರ ಮತ್ತು ಯೋಜಿತ ಅಭಿವೃದ್ಧಿ ಖಾತ್ರಿಪಡಿಸುವ ಮೂಲಕ ಉತ್ತಮ ಗುಣಮಟ್ಟದ ಮೂಲಸೌಕರ್ಯದೊಂದಿಗೆ ಜಾಗತಿಕ ತಾಣವಾಗಿ ಪರಿವರ್ತಿಸಲು ಈ ಸಮಿತಿ ಕೆಲಸ ಮಾಡಲಿದೆ.
    ಸಂಚಾರ ನಿರ್ವಹಣೆ, ಪರಿಸರ, ಘನ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸರಿಯಾದ ಬಳಕೆ ಮುಂತಾದ ಕಾರ್ಯಕ್ಷೇತ್ರ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸರಿಯಾದ ಬಳಕೆ ಮುಂತಾದ ಕಾರ್ಯಕ್ಷೇತ್ರ ಆವರ್ತಕ ನವೀಕರಣಕ್ಕಾಗಿ ಕ್ರಮಗಳನ್ನು ಸೂಚಿಸುವ, ಸಾರ್ವಜನಿಕ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನ ಸ್ನೇಹಿ ಇ ಆಡಳಿತ, ಉತ್ತಮ ಗುಣಮಟ್ಟದ ನೀರಿನ ಲಭ್ಯತೆ, ಭದ್ರತೆ, ಪ್ರವಾಹಗಳ ಸಮರ್ಪಕ ನಿರ್ವಹಣೆ, ಉತ್ತಮ ಆಡಳಿತಕ್ಕಾಗಿ ಸೂಕ್ತ ಸಾಂಸ್ಥಿಕ ಕಾರ್ಯವಿಧಾನ ಸೂಚಿಸುವುದು, ವೈಜ್ಞಾನಿಕ ರೀತಿಯಲ್ಲಿ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಶಿಾರಸು ಮಾಡುವುದು ಸಮಿತಿಯ ಜವಾಬ್ದಾರಿಯಾಗಿದೆ.
    ನಿವೃತ್ತ ಮುಖ್ಯಕಾರ್ಯದರ್ಶಿ ಬಿ.ಎಸ್.ಪಾಟೀಲ್ ಸಮಿತಿ ಅಧ್ಯಕ್ಷರಾಗಿದ್ದು, ನಿವೃತ್ತ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ, ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಿರ್ದೇಶಕ ರವಿಚಂದರ್ ಸಮಿತಿ ಸದಸ್ಯರಾಗಿರುತ್ತಾರೆ.
    ಬಿಬಿಎಂಪಿ ವ್ಯಾಪ್ತಿಯ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, ಬಿಎಂಆರ್‌ಡಿಎ, ನಗರ ಭೂ ಸಾರಿಗೆ ನಿರ್ದೇಶನಾಲಯ, ಬಿಎಂಎಲ್‌ಟಿಎ ಮತ್ತು ಮೆಟ್ರೋದಂತಹ ರಾಝ್ಯ ಸರ್ಕಾರ ಇಲಾಖೆಗಳನ್ನು ಒಳಗೊಂಡ ಬೆಂಗಳೂರು ಆಡಳಿತವನ್ನು ಮರು ಇಮೇಜಿಂಗ್ ಮಾಡಲು ಕೈಗೊಳ್ಳಬಹುದಾದ ಪ್ರಕ್ರಿಯೆಗಳ ಬಗ್ಗೆ ಸಮಿತಿ ಅಧ್ಯಯನ ನಡೆಸಿ ವರದಿ ಕೊಡಬಹುದು.
    ಮಹಾನಗರ ಪೊಲೀಸ್, ಅಗ್ನಿಶಾಮಕ ವಿಭಾಗ, ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿ, ಬಿಎಂಟಿಸಿ, ಬೆಸ್ಕಾಂ, ಸಬ್ ಅರ್ಬನ್ ರೈಲು ನಂತಹ ಕಾರ್ಪೊರೇಷನ್‌ಗಳನ್ನು ಸಮನ್ವಯಿಸಿಕೊಂಡಂತೆ ಅಧ್ಯಯನ ನಡೆಸಿ ವರದಿ ಕೊಡಬಹುದಾಗಿದೆ.
    ಬಿಬಿಎಂಪಿ ಆಯುಕ್ತರು (ವಿಶೇಷ) ಈ ಸಮಿತಿಗೆ ಬೇಕಾಗಿರುವ ಮಾಹಿತಿ ಒದಗಿಸಬೇಕು ಮತ್ತು ಈ ಸಂಬಂಧ ಕರೆಯಬೇಕಾಗಿರುವ ಸಭೆಗಳ ಬಗ್ಗೆ ಸಮನ್ವಯ ಕಾರ್ಯ ನಿರ್ವಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts