More

    ಚಿಲ್ಲರೆ ವ್ಯಾಪಾರಿಗಳಿಂದ ಹಗಲುದರೋಡೆ- ಪ್ರತ್ಯಕ್ಷವಾಯಿತು ನಾಗರಹಾವು- ಎಲ್ಲರಿಗೂ ಶಾಕ್ !

    ಬೆಂಗಳೂರು: ಕರೊನಾ ನಿಯಂತ್ರಿಸಲು ರಾಜ್ಯದೆಲ್ಲೆಡೆ ಲಾಕ್​ಡೌನ್ ವಿಧಿಸಿದ್ದರೂ ರಾಮನವಮಿ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ರೈತರು ಬೆಳೆದ ತರಕಾರಿ, ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿವೆ. ಇದರಿಂದ ಬೆಲೆಯಲ್ಲಿ ಏಕಾಏಕಿ ಇಳಿಕೆ ಕಂಡಿದೆ. ಆದರೂ, ಕೆಲ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

    ದಾಸನಪುರ ಮಾರುಕಟ್ಟೆಗೆ ಬುಧವಾರ 20 ಸಾವಿರ ಮೂಟೆ ಆಲೂಗಡ್ಡೆ, 60ರಿಂದ 70 ಸಾವಿರ ಮೂಟೆ ಈರುಳ್ಳಿ ಆವಕವಾಗಿದೆ. 125ಕ್ಕೂ ಹೆಚ್ಚು ಅಧಿಕ ಸರಕು ಸಾಗಣೆ ವಾಹನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತರಕಾರಿ ಬಂದಿದೆ. ಮೈಸೂರು ರಸ್ತೆ ಮೈದಾನದಲ್ಲಿ 20 ವಾಹನ, ಸಿಂಗೇನ ಅಗ್ರಹಾರದಲ್ಲಿ 20 ವಾಹನಗಳಲ್ಲಿ ತರಕಾರಿ ತರಲಾಗಿದೆ.

    ಟೊಮ್ಯಾಟೊ, ಕ್ಯಾರೆಟ್, ಹಸಿ ಮೆಣಸಿನಕಾಯಿ, ಹುರಳಿಕಾಯಿ, ಗೆಡ್ಡೆಕೋಸು, ಮೂಲಂಗಿ, ಬಜ್ಜಿ ಮೆಣಸಿನಕಾಯಿ ಕೆ.ಜಿ.ಗೆ ಕನಿಷ್ಠ 5 ರೂ.ಯಿಂದ ಗರಿಷ್ಠ 20 ರೂ.ವರೆಗೆ ದಾಸನಪುರ ಮಾರುಕಟ್ಟೆಯಲ್ಲಿ ಬುಧವಾರ ಮಾರಾಟವಾಗಿದೆ. ಸೌತೆಕಾಯಿ ಕೆ.ಜಿ.ಗೆ 10 ರೂ.ಗೆ, ಕರ್ಬೂಜ ಹಣ್ಣು ಕೆ.ಜಿ.ಗೆ 10 ರಿಂದ 15 ರೂ.ಗೆ ಮತ್ತು ನಿಂಬೆಹಣ್ಣು ಕನಿಷ್ಠ 1 ರೂ. ಅಥವಾ 2 ರೂ.ಗೆ ಮಾರಾಟವಾಗಿದೆ ಎಂದು ವರ್ತಕರೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.

    10 ರೂ.ಗೆ 100 ರೂ. ಲಾಭ ಸರಿಯೇ?: ದೇಶವೇ ಸಂಕಷ್ಟದಲ್ಲಿರಬೇಕಾದರೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಿ ದುಪ್ಪಟ್ಟು ಲಾಭ ಮಾಡುವುದು ಎಷ್ಟು ಸರಿ ಎಂದು ತರಕಾರಿ ಸಗಟು ಮಾರುಕಟ್ಟೆ ವರ್ತಕರೊಬ್ಬರು ಪ್ರಶ್ನಿಸಿದ್ದಾರೆ. ಲಾಭ ಮಾಡಬೇಕು, ಆದರೆ 10 ರೂ.ಗೆ ತಂದು 100 ರೂ.ಗೆ ಮಾರಾಟ ಮಾಡುವುದು ಮೋಸದ ಪರಮಾವಧಿ. ದಯವಿಟ್ಟು ಈ ರೀತಿ ದುಪ್ಪಟ್ಟು ಹಣ ವಸೂಲಿ ಮಾಡಬೇಡಿ ಎಂದು ಚಿಲ್ಲರೆ ಮಾರಾಟಗಾರರಿಗೆ ಮನವಿ ಮಾಡಿದ್ದಾರೆ.

    ಮಾದರಿ ಮಾರುಕಟ್ಟೆ: ಯಶವಂತಪುರ ಮಾರುಕಟ್ಟೆಯ 2 ಎಕರೆ ಕಿಷ್ಕಿಂಧೆ ಯಂಥ ಪ್ರದೇಶದಲ್ಲಿ ನೂರಾರು ಜನ ಮಾರಾಟ ಮಾಡುತ್ತಿದ್ದೆವು. ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ದಾಸನಪುರ ಮಾರುಕಟ್ಟೆ ವಿಶಾಲವಾಗಿದೆ. ತರಕಾರಿ ಮಾರುಕಟ್ಟೆಗೆ ಅಂದಿನ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಅವರ ಸಹಕಾರವೂ ಇದೆ. 17 ಎಕರೆ ವಿಶಾಲವಾದ ಮಾರುಕಟ್ಟೆ ಇದಾಗಿದೆ. ಬೇರೆಡೆ ಹೋಲಿಸಿದರೆ ಇದು ಮಾದರಿ ಮಾರುಕಟ್ಟೆ ಎಂದು ತರಕಾರಿ ಮಂಡಿಯ ಅಧ್ಯಕ್ಷ ಗೋವಿಂದಪ್ಪ ತಿಳಿಸಿದ್ದಾರೆ.

    ಪ್ರತ್ಯಕ್ಷವಾಯ್ತು ನಾಗರಹಾವು: ಸಿಂಗೇನ ಅಗ್ರಹಾರ ಮಾರುಕಟ್ಟೆಗೆ ಬುಧವಾರ ತರಕಾರಿ ಖರೀದಿಗೆಂದು ಬಂದಿದ್ದ ಗ್ರಾಹಕರ ಕಾರಿನ ಇಂಜಿನ್ ಬಾನೆಟ್​ನಲ್ಲಿ ಬೆಳಗ್ಗೆ ನಾಗರಹಾವು ಕಾಣಿಸಿಕೊಂಡು ಆತಂಕ ಸೃಷ್ಟಿ ಯಾಗಿತ್ತು. ನಂತರ ಹಾವಾಡಿಗನನ್ನು ಕರೆಸಿ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ಮಾರುಕಟ್ಟೆ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಹೆಚ್ಚಾಗಿವೆ. ವರ್ತಕರಿಗಾಗಲಿ, ಗ್ರಾಹಕರಿಗಾಗಲಿ ಇಲ್ಲಿ ಯಾವುದೇ ಸುರಕ್ಷತೆ ಒದಗಿಸಿಲ್ಲ ಎಂದು ವರ್ತಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಲಾಸಿಪಾಳ್ಯದಲ್ಲಿ ಕದ್ದು ಮುಚ್ಚಿ ಮಾರಾಟ: ಕಲಾಸಿಪಾಳ್ಯದಲ್ಲಿ ತರಕಾರಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆದರೆ ಪೊಲೀಸರೇ ಹಣ ಪಡೆದು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕೆಲ ವರ್ತಕರು ದೂರಿದ್ದಾರೆ.

    ಇಂದಿರಾ ಕ್ಯಾಂಟೀನ್ ಊಟದ ಮೇಲೇಕೆ ಪಾಲಿಕೆ ಸದಸ್ಯರ ಕಣ್ಣು? ನಿಯಮ ಉಲ್ಲಂಘಿಸಿ ಅವರು ಮಾಡುತ್ತಿರುವುದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts