More

    ಜವಾಬ್ದಾರಿ ಹೆಚ್ಚಿಸುವಲ್ಲಿ ಸಹಕಾರಿ

    ಯಲಬುರ್ಗಾ: ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಶಿಸ್ತುಬದ್ಧ, ಸೇವಾನಿರತ ಸಂಸ್ಥೆಯಾಗಿದ್ದು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಸಹಾಯಕ ವೀರನಗೌಡ ಪಾಟೀಲ್ ಹೇಳಿದರು.

    ಇದನ್ನೂ ಓದಿ: ಬಿಬಿಎಂಪಿ: ವಿಪತ್ತು ನಿರ್ವಹಣೆಗೆ ವಾರ್ಡ್‌ಗೊಬ್ಬ ಇಂಜಿನಿಯರ್‌ಗೆ ಜವಾಬ್ದಾರಿ

    ಪಟ್ಟಣದ ಉಪಖಜಾನೆ ಕಚೇರಿ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಯಲಬುರ್ಗಾ ಹಾಗೂ ಕುಕನೂರು ಸ್ಥಳೀಯ ಸಂಸ್ಥೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ಚೀಟಿ ಬಿಡುಗಡೆ ಹಾಗೂ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಂಸ್ಥೆಯಲ್ಲಿ ಸಹಸ್ರಾರು ಸಂಖ್ಯೆಯ ಮಕ್ಕಳಿದ್ದಾರೆ. ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಸಾಮಾಜಿಕ ಕಳಕಳಿ ಮೂಡಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ. ಮಕ್ಕಳ ಮಾನಸಿಕ ವಿಕಸನಕ್ಕೆ ಸಂಸ್ಥೆ ಸಹಕಾರಿಯಾಗಿದೆ ಎಂದರು.

    ತಹಸೀಲ್ ಕಚೇರಿ, ಬಿಇಒ ಕಚೇರಿ, ಪೊಲೀಸ್ ಠಾಣೆ, ತಾಪಂ, ಕೃಷಿ ಇಲಾಖೆ, ಅಕ್ಷರ ದಾಸೋಹ ಕಚೇರಿ, ರೆಜಿಸ್ಟರ್ ಆಫೀಸ್‌ಗೆ ತೆರಳಿ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಧ್ವಜಚೀಟಿ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಧನ ಸಂಗ್ರಹಿಸಲಾಯಿತು.

    ಸಂಸ್ಥೆಯ ಪದಾಧಿಕಾರಿಗಳಾದ ಸತೀಶ ಚನ್ನಪ್ಪಗೌಡ, ಸಂಗಯ್ಯ ಹಿರೇಮಠ, ಖಾದರ್‌ಬಾಷಾ, ಯಮನೂರಪ್ಪ, ಮಲ್ಲಯ್ಯ ಪುರಾಣಿಕಮಠ, ಸುನಂದದೇವಿ, ರೇಣುಕಾ, ಬಾಳಪ್ಪ ಮುಗುಳಿ, ಕಳಕಪ್ಪ ಬೇವೂರು, ರಮೇಶ ಆಹೋಜಿ, ವೀರಪ್ಪ ಗಾಣಿಗೇರಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts