More

    ಸಂಚಾರ ತಡೆದು ಪ್ರತಿಭಟನೆ

    ಅಂಕೋಲಾ: ರಾ.ಹೆ. 66ರ ಬಳಲೆ-ಮಾದನಗೇರಿ ಕ್ರಾಸ್ ಬಳಿ ಹೆದ್ದಾರಿ ಮೇಲ್ಸೆತುವೆ ನಿರ್ವಿುಸಬೇಕು ಎಂದು ಆಗ್ರಹಿಸಿ ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಜನಪ್ರತಿನಿಧಿಗಳು, ಸಾರ್ವಜನಿಕರು ಹೆದ್ದಾರಿ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, 2-3 ವರ್ಷಗಳಿಂದ ಮನವಿ ನೀಡುತ್ತಲೇ ಬಂದಿದ್ದರೂ ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರ ಕಂಪನಿಗಳು ನಿರ್ಲಕ್ಷ್ಯ ವಹಿಸುತ್ತಿವೆ. ಪ್ರಯಾಣಿಕರ ಹಾಗೂ ಸ್ಥಳೀಯರ ಜೀವದ ಜತೆ ಚೆಲ್ಲಾಟವಾಡುತ್ತಿವೆ. ಒಂದು ತಿಂಗಳೊಳಗೆ ಈ ಸಮಸ್ಯೆ ಬಗೆಹರಿಸಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಪ್ರತಿಭಟನಾಕರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ತಹಸೀಲ್ದಾರ್ ಮತ್ತು ಜಿಪಂ ಸದಸ್ಯ ಪ್ರದೀಪ ದೇವರಭಾವಿ ನಡುವೆ ವಾಗ್ವಾದ ನಡೆಯಿತು. ಪೊಲೀಸ್ ಅಧಿಕಾರಿಗಳು ಮತ್ತು ಕೆಲ ಪ್ರತಿಭಟನಾ ಮುಖಂಡರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿ, ಎಸಿ ಅವರು ಸ್ಥಳಕ್ಕೆ ಬರುವುದಾಗಿ ಭರವಸೆ ನೀಡಿದರು.

    ಉಪ ವಿಭಾಗಾಧಿಕಾರಿ ಅಜಿತ ಎಂ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, 2-3 ದಿನಗಳ ಹಿಂದೆ ಬಂದು ಪರಿಶೀಲಿಸಿ ಹೋಗಿದ್ದೇನೆ. ಈ ಕುರಿತು ತಮ್ಮ ಅಹವಾಲನ್ನು ಸಂಬಂಧಿಸಿದವರಿಗೆ ತಲುಪಿಸಲಾಗುವುದು ಎಂದರು.

    ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ, ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ, ಜಿಪಂ ಸದಸ್ಯ ಪ್ರದೀಪ ದೇವರಭಾವಿ, ರಾಜೀವ ಗಾಂವಕರ ಹಿರೇಗುತ್ತಿ ಮಾತನಾಡಿದರು.

    ಹೆದ್ದಾರಿ ತಡೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಟ್ರಾಫಿಕ್ ಸಮಸ್ಯೆ ಆಗದಂತೆ ವಾಹನಗಳು ಮುಂದೆ ಹೋಗಲು ಅನುವು ಮಾಡಿಕೊಡಲು ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್​ಐ ಈ.ಸಿ. ಸಂಪತ್, ಮೋಹನದಾಸ ಶೇಣ್ವಿ, ಮತ್ತು ಸಿಬ್ಬಂದಿ ಹರಸಾಹಸ ಪಡುವಂತಾಯಿತು.

    ಗ್ರಾಮೀಣ ಹೋರಾಟ ಸಮಿತಿ ಅಧ್ಯಕ್ಷ ದೇವರಾಯ ನಾಯಕ, ಮಾಜಿ ಶಾಸಕ ಸತೀಶ ಸೈಲ್, ಜಿಪಂ ಸದಸ್ಯ ಜಗದೀಶ ಮೊಗಟಾ, ಗೋಕರ್ಣ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಮೋಹನ ನಾಯಕ ದೇವರಭಾವಿ, ಕುಮಟಾ ತಾಪಂ ಸದಸ್ಯೆ ಮಹೇಶ ಶೆಟ್ಟಿ ಗೋಕರ್ಣ, ಪ್ರಮುಖರಾದ ಮಹೇಶ ಶೆಟ್ಟಿ ಗೋಕರ್ಣ, ಬಿ.ಡಿ. ನಾಯ್ಕ, ಪಾಂಡುರಂಗ ಗೌಡ, ಜಗದೀಶ ಖಾರ್ವಿ, ಸಂದೀಪ ಬಂಟ, ರಾಜು ಕೆ.ಗಾಂವಕರ, ರಾಮು ಕೆಂಚನ್ ಹಿರೇಗುತ್ತಿ, ತ್ರಯಂಬಕ ಬಾಂದೇಕರ್, ಬೊಮ್ಮಯ್ಯ ನಾಯಕ, ರಾಜೇಶ ಎಂ. ನಾಯ್ಕ, ಮಾಣಿ ನಾಯ್ಕ, ಹೊಸಬಣ್ಣ ನಾಯಕ, ಬಾಲಚಂದ್ರ ಶೆಟ್ಟಿ, ಗಣಪತಿ ಮೂಲೆಮನೆ, ಸತೀಶ ಗೌಡ ಇತರರು ಇದ್ದರು.

    ಕಲ್ಪಿತ ಶವ ಇಟ್ಟು ಪ್ರತಿಭಟನೆ: ಹೋರಾಟ ಸಮಿತಿಯ ಪ್ರಮುಖ ದೇವರಾಯ ನಾಯಕ ಸಗಡಗೇರಿ ಮತ್ತು ಸದಸ್ಯರು, ರಸ್ತೆ ಅಪಘಾತದಲ್ಲಿ ಮೃತನಾದ ಬೈಕ್ ಸವಾರನ ಕಲ್ಪಿತ ಶವವನ್ನು ಹೆದ್ದಾರಿಯಲ್ಲಿ ಇಟ್ಟು ಪ್ರತಿಭಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts