More

    ವಸತಿ ರಹಿತರಿಗೆ ಗವನಹಳ್ಳಿ ಭೂಮಿ ಕಾಯ್ದಿರಿಸಿ

    ಚಿಕ್ಕಮಗಳೂರು: ಗವನಹಳ್ಳಿ ಸಮೀಪದ 16 ಎಕರೆ ಭೂಮಿಯನ್ನು ಮಂಜೂರುದಾರರಿಗೆ ಮಾರಾಟ ನಡೆಸಲು ಅವಕಾಶ ನೀಡದೇ ವಸತಿರಹಿತ ಬಡ ಕುಟುಂಬಗಳಿಗೆ ಕಾಯ್ದಿರಿಸಬೇಕು ಎಂದು ಎಎಪಿ ಮುಖಂಡರು ಮಂಗಳವಾರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
    ಗವನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ನಿವೇಶನ ರಹಿತರಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ ಸಮರ್ಪಕ ನಿವೇಶನ ಹಂಚಿಕೆ ಮಾಡಬೇಕು. 1978ರಲ್ಲೇ ಭೂಮಿ ಮಂಜೂರು ಮಾಡಿಸಿಕೊಂಡಿರುವವರು ಕೃಷಿ ಚಟುವಟಿಕೆ ಅಥವಾ ಜೀವನೋಪಾಯಕ್ಕೆ ಬಳಸಿಕೊಳ್ಳಬೇಕು ಎಂದಿದೆ. ಆದರೆ ಮಂಜೂರುದಾರರು ಇದನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂದು ದೂರಿದರು.
    ಕಳೆದ 2008ರಲ್ಲಿ ಉಪವಿಭಾಗಾಧಿಕಾರಿ ದಯಾನಂದ್ ಜಾಗದ ಪರಿಶೀಲನೆ ನಡೆಸಿ ಮಂಜೂರಾತಿ ಉದ್ದೇಶ ಪಾಲಿಸದಿರುವುದರಿಂದ ಹಾಗೂ ಸ್ವಾಧೀನಾನುಭವನದಲ್ಲಿ ಇಲ್ಲದ ಕಾರಣ ನೀಡಿ ಜಮೀನಿನ ಮಂಜೂರಾತಿಯನ್ನು ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ರದ್ದುಗೊಳಿಸಿ ಶಿಫಾರಸ್ಸಿನ ಕಡಿತ ಹಿಂದಿರುಗಿಸಲಾಗಿದೆ ಎಂದು ಹೇಳಿದರು.
    ಆದರೆ ಮತ್ತೆ ಅದೇ ಫಲಾನುಭವಿಗಳು ಖಾಸಗಿ ವ್ಯಕ್ತಿಗಳಿಗೆ ವ್ಯಾಪಾರ ಒಪ್ಪಂದ ಮುಂದುವರೆಸಿ ನಾಲ್ಕು ದಶಕಗಳ ನಂತರ ಗೈರು ವಿಲೆ ಭೂ ಮಾಫಿಯಾದ ಕಡತವನ್ನು ತಯಾರಿಸಿ ಮಾರಾಟಕ್ಕೆ ಮುಂದಾಗಿದೆ. ಅದಲ್ಲದೇ ಭೂಮಿ ಮಂಜೂರುದಾರು ಹಣದ ಆಸೆಗಾಗಿ ಮಾರಾಟಕ್ಕೆ ಮುಂದಾಗಿರುವ ದೌರ್ಬಲ್ಯ ಬಳಸಿಕೊಂಡು ಕೆಲವು ಭೂ ಮಾಫಿಯಾ ವ್ಯಕ್ತಿಗಳು ಪಕ್ಕದ ಸರ್ಕಾರಿ ಜಾಗ ಕಬಳಿಸಲು ಸಂಚು ರೂಪಿಸಿದ್ದಾರೆ ಎಂದರು.
    ಜಮೀನಿನ ಪ್ರದೇಶ ನಗರಕ್ಕೆ ಸಮೀಪವಿರುವ ಹಾಗೂ ವಸತಿ ಬಡಾವಣೆಗೆ ಸೂಕ್ತವಾಗಿರುವುದರಿಂದ ನಗರ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ಜಾಗ ಕಾಯ್ದಿರಿಸಿದರೆ ನೂರಾರು ಬಡ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಸರ್ವೇ ನಂ.92ರ 16 ಎಕರೆ ಪ್ರದೇಶವನ್ನು ರಾಜೀವ್‌ಗಾಂಧಿ ವಸತಿ ನಿಗಮದಿಂದ ಹಣ ಪಾವತಿಸುವ ಮೂಲಕ ಬಡವರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು. ಎಎಪಿ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಎಎಪಿ ಮಾಧ್ಯಮ ವಕ್ತಾರ ಡಾ.ಕೆ.ಸುಂದರಗೌಡ, ಕಾರ್ಯದರ್ಶಿ ಎಂ.ಪಿ.ಈರೇಗೌಡ, ಮುಖಂಡ ಸುನೀಲ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts