More

    ಮಕ್ಕಳ ಚಿಕಿತ್ಸೆಗೆ ಹಾಸಿಗೆ ಮೀಸಲಿಡಿ

    ಹಾವೇರಿ: ಜಿಲ್ಲೆಯಲ್ಲಿ ಜೂ. 21ರಿಂದ ಮಕ್ಕಳಿಗಾಗಿ ವಿಶೇಷ ಆರೋಗ್ಯ ಶಿಬಿರ ಆರಂಭಿಸಲು ಹಾಗೂ ಮಕ್ಕಳ ಚಿಕಿತ್ಸೆಗಾಗಿ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ 20ರಿಂದ 25ಆಕ್ಸಿಜನ್ ಬೆಡ್ ಹಾಗೂ ಪ್ರತಿ ತಾಲೂಕಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಕನಿಷ್ಠ 20ರಿಂದ 25 ಬೆಡ್​ಗಳನ್ನು ಮಕ್ಕಳ ಚಿಕಿತ್ಸೆಗಾಗಿ ಮೀಸಲಿಡುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

    ಸೊನ್ನೆಯಿಂದ ಆರು ವರ್ಷದ ಮಕ್ಕಳ ಪಟ್ಟಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪಡೆಯಬೇಕು. ಆರರಿಂದ 16ವರ್ಷದ ಮಕ್ಕಳ ಪಟ್ಟಿಯನ್ನು ಶಾಲಾವಾರು ಆಯಾ ಶಾಲಾ ಮುಖ್ಯೋಪಾಧ್ಯಾಯರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪಡೆದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡಲು ಸೂಚಿಸಿದ್ದಾರೆ.

    ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು ತಮ್ಮ ತಂಡದೊಂದಿಗೆ ಮೈಕ್ರೋಪ್ಲ್ಯಾನ್ ತಯಾರಿಸಿ ಜಿಪಂ ಸಿಇಒ ಮೂಲಕ ಜೂ. 14ರೊಳಗೆ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗಾಗಿ ವಿಶೇಷ ಆರೋಗ್ಯ ಶಿಬಿರ ನಡೆಯುವಾಗ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಜರಿದ್ದು, ಮಕ್ಕಳ ಪಾಲಕರಿಗೆ ಆಹಾರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

    ಬೆಡ್ ವಿವರ: ರಾಣೆಬೆನ್ನೂರ, ಬ್ಯಾಡಗಿ ತಾಲೂಕಿನಲ್ಲಿ ತಲಾ 40 ಬೆಡ್, ಹಿರೇಕೆರೂರು ತಾಲೂಕಲ್ಲಿ 60, ರಟ್ಟಿಹಳ್ಳಿ ತಾಲೂಕಿನಲ್ಲಿ 15, ಹಾವೇರಿ ಆರ್ಯುವೇದ ಆಸ್ಪತ್ರೆಯಲ್ಲಿ 25, ಶಿಗ್ಗಾಂವಿ ತಾಲೂಕಿನಲ್ಲಿ 47, ಸವಣೂರಲ್ಲಿ 32, ಹಾನಗಲ್ಲದಲ್ಲಿ 45 ಬೆಡ್ ಸೇರಿ ಒಟ್ಟಾರೆ 11 ಆಸ್ಪತ್ರೆಗಳಲ್ಲಿ 119 ಹಾಗೂ ಕೋವಿಡ್ ಕೇರ್ ಸೆಂಟರ್​ನಲ್ಲಿ 195 ಬೆಡ್​ಗಳ ವ್ಯವಸ್ಥೆ ಹಾಗೂ ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ 15 ಆಕ್ಸಿಜನ್ ಬೆಡ್ ಉಳ್ಳ ಮಕ್ಕಳ ವಾರ್ಡ್​ನ್ನು ಆರಂಭಿಸಲಾಗಿದೆ. ಪ್ರತಿಮಕ್ಕಳ ವಾರ್ಡ್​ನ ಪಕ್ಕದಲ್ಲಿ ಮಕ್ಕಳ ಕೇರ್ ಟೇಕರ್​ಗಾಗಿ ಪ್ರತ್ಯೇಕ ರೂಂಗಳನ್ನು ಗುರುತಿಸಲು ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts