More

    ಸಂವಿಧಾನದಲ್ಲಿ ಎಲ್ಲ ಜನಾಂಗಕ್ಕೂ ಮೀಸಲಾತಿ

    ಆಲ್ದೂರು: ಸಂವಿಧಾನ ಎಲ್ಲ ಜನಾಂಗಕ್ಕೂ ಮೀಸಲಾತಿ ನೀಡಿದೆ. ಸಂವಿಧಾನದಿಂದಾಗಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿದ್ದಾರೆ ಎಂದು ಗ್ರಾಪಂ ಸದಸ್ಯ, ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್ ಹೇಳಿದರು.

    ಜಿಪಂ, ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಮಂಗಳವಾರ ಪಟ್ಟಣದಲ್ಲಿ ಸ್ವಾಗತಿಸಿ, ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಅಸಮಾನತೆ, ಲಿಂಗ ತಾರತಮ್ಯ, ಜಾತಿ ಭೇದ ತಿರಸ್ಕರಿಸಿದೆ ಎಂದರು.
    ಗ್ರಾಪಂ ಅಧ್ಯಕ್ಷೆ ಜಯಶೀಲಾ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕುಗಳಿಂದಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಸಿಗುತ್ತಿದೆ ಎಂದರು.
    ಉಪಾಧ್ಯಕ್ಷ ಡಿ.ಬಿ.ಅಶೋಕ್ ಮಾತನಾಡಿ, ಪ್ರತಿ ಹಳ್ಳಿಯಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಪವಿತ್ರ ಗ್ರಂಥಗಳ ಜತೆ ಸಂವಿಧಾನವನ್ನೂ ಬೋಧಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
    ಅಂಬೇಡ್ಕರ್ ಹೋರಾಟ ವೇದಿಕೆ ಗೌರವ ಅಧ್ಯಕ್ಷ ಯಲಗುಡಿಗೆ ಹೊನ್ನಪ್ಪ ಮಾತನಾಡಿದರು. ಶಾಲೆಯ ಮಕ್ಕಳಿಗೆ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು.
    ಸಂವಿಧಾನ ರಥಯಾತ್ರೆಯಲ್ಲಿ ಅಂಬೇಡ್ಕರ್ ಸ್ತಬ್ಧ ಚಿತ್ರದ ಎದುರು ಡಿಎಸ್‌ಎಸ್‌ನ ನೀಲಿ ಬಾವುಟ ಇರಿಸಲಾಗಿತ್ತು. ಗ್ರಾಪಂ ಸದಸ್ಯರೊಬ್ಬರು ಬಾವುಟ ತೆಗೆಯಲು ಹೇಳಿದ್ದಾರೆ ಎಂದು ಕಾರ್ಯಕರ್ತರು ಸದಸ್ಯರ ವಿರುದ್ಧ ಘೋಷಣೆ ಕೂಗಿ ಗ್ರಾಪಂ ಒಳಗೆ ನುಗ್ಗಿ ಸದಸ್ಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಚೇರಿ ಎದುರು ಧರಣಿ ಕುಳಿತರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕರ್ತರ ಮನವೊಲಿಸಿದರು. ಗ್ರಾಪಂ ಸದಸ್ಯೆ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿದ ನಂತರ ಧರಣಿ ನಿಲ್ಲಿಸಿದರು.
    ಪಿಡಿಒ ಶಂಶುನ್ ನಹರ್, ಕಾರ್ಯದರ್ಶಿ ಉಷಾ, ಗ್ರಾಪಂ ಸದಸ್ಯರಾದ ಕೌಷಿಕ್, ಭರತ್, ಪ್ರತಿಭಾ, ನಾಗರತ್ನಾ, ಲಿಯಾಕತ್ ಆಲಿ,ನಿತಿನ್, ಪವಿತ್ರಾ, ಬಾಬರ್ ಪಾಷಾ, ಗಿರೀಶ್, ಗೋಪಾಲ್, ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ಡಿಎಸ್‌ಎಸ್ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ದೇವರಹಳ್ಳಿ ಉಮೇಶ್, ಸುಂದರ್, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts